ಕೆಲವೇ ಗಂಟೆಗಳಲ್ಲಿ ಮುಂಬೈ ತಲುಪಲಿದೆ ಉಕ್ರೇನ್ನಲ್ಲಿದ್ದ ಭಾರತೀಯರನ್ನು ಹೊತ್ತ ಏರ್ ಇಂಡಿಯಾ ವಿಮಾನ..! 26-02-2022 5:18PM IST / No Comments / Posted In: Latest News, Live News, International ಯುದ್ಧ ಪೀಡಿತ ಉಕ್ರೇನ್ನಲ್ಲಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಲೇ ಇದೆ. ಈ ನಡುವೆ 219 ನಾಗರಿಕರನ್ನು ಹೊತ್ತ ಮೊದಲ ಏರ್ ಇಂಡಿಯಾ ವಿಮಾನವು ರೋಮೇನಿಯಾದಿಂದ ಹೊರಟಿದ್ದು ಸಂಜೆ 6:30ರ ಸುಮಾರಿಗೆ ಮುಂಬೈ ವಿಮಾನ ನಿಲ್ದಾಣವನ್ನು ತಲುಪಲಿದೆ. ರಷ್ಯಾ ಹಾಗೂ ಉಕ್ರೇನ್ ನಡುವೆ ಪೂರ್ಣ ಪ್ರಮಾಣದಲ್ಲಿ ಮಿಲಿಟರಿ ಕಾರ್ಯಾಚರಣೆ ಆರಂಭಗೊಂಡ ಬಳಿಕ ಉಕ್ರೇನ್ನಿಂದ ಭಾರತಕ್ಕೆ ಬಂದ ಮೊದಲ ವಿಮಾನ ಇದಾಗಿದೆ. ವಿಮಾನದ ಒಳಗೆ ಭಾರತೀಯ ನಾಯಕರು ಕುಳಿತುಕೊಂಡಿರುವ ಸಾಕಷ್ಟು ಫೋಟೋ ಹಾಗೂ ವಿಡಿಯೋಗಳು ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಒಂದು ವಿಡಿಯೋದಲ್ಲಿ ರೊಮೇನಿಯಾದಲ್ಲಿರುವ ಭಾರತೀಯ ರಾಯಭಾರಿ ರಾಹುಲ್ ಶ್ರೀವಾಯ್ಸವ ಉಕ್ರೇನ್ನಲ್ಲಿ ಒಬ್ಬನೇ ಒಬ್ಬ ಭಾರತೀಯ ಪ್ರಜೆಯನ್ನು ನಾವು ಬಿಟ್ಟರೂ ನಮ್ಮ ಮಿಷನ್ ಪೂರ್ಣಗೊಳ್ಳುವುದಿಲ್ಲ ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡುತ್ತಿರುವುದನ್ನು ಕೇಳಬಹುದಾಗಿದೆ. ಉಕ್ರೇನ್ನಲ್ಲಿರುವ ಭಾರತೀಯರನ್ನು ಸಂಪರ್ಕಿಸಿ ಅವರನ್ನು ವಾಪಸ್ ತಾಯ್ನಾಡಿಗೆ ಕರೆತರಲು ಭಾರತವು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಜೀವನದಲ್ಲಿ ತುಂಬಾ ಕಷ್ಟ ಬಂದಿದೆ ಎಂದೆನಿಸಿದ ಕ್ಷಣ ಈ ದಿನ ಅಂದರೆ ಫೆಬ್ರವರಿ 26ನ್ನು ನೆನಪಿಸಿಕೊಳ್ಳಿ. ನೆನಪಿಡಿ. ಎಲ್ಲರಿಗೂ ಒಳ್ಳೆಯದೇ ಆಗುತ್ತದೆ ಎಂದು ಹೇಳಿದರು. Regarding evacuation of Indian nationals from Ukraine, we are making progress. Our teams are working on the ground round the clock. I am personally monitoring. The first flight to Mumbai with 219 Indian nationals has taken off from Romania. pic.twitter.com/8BSwefW0Q1 — Dr. S. Jaishankar (Modi Ka Parivar) (@DrSJaishankar) February 26, 2022