ದೇಶವನ್ನು ಉಳಿಸಲು ತನ್ನನ್ನು ತಾನೇ ಸ್ಫೋಟಿಸಿಕೊಂಡ ಉಕ್ರೇನ್ ಧೀರ ಯೋಧ..! 26-02-2022 3:25PM IST / No Comments / Posted In: Latest News, Live News, International ರಷ್ಯಾದ ಪಡೆಗಳು ಕ್ರೈಮಿಯಾಗೆ ನುಗ್ಗುವುದನ್ನು ತಡೆಯುವ ಸಲುವಾಗಿ ಸೇತುವೆಯನ್ನು ಧ್ವಂಸಗೊಳಿಸಲು ಉಕ್ರೇನಿಯನ್ ಸೈನಿಕನು ತನ್ನನ್ನು ತಾನೇ ಧ್ವಂಸಗೊಳಿಸಿಕೊಂಡಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕೆರ್ಸನ್ ಪ್ರದೇಶದ ಹೆನಿಚೆಸ್ಕ್ ಸೇತುವೆಯಲ್ಲಿ ರಷ್ಯಾದ ಟ್ಯಾಂಕರ್ಗಳನ್ನು ಹಿಮ್ಮೆಟ್ಟಿಸುವ ಪ್ರಯತ್ನದಲ್ಲಿ ಧೈರ್ಯಶಾಲಿ ಯೋಧ ವಿಟಾಲಿ ಸ್ಕಕುನ್ ವೊಮೊಡಿಮಿರೊವಿಚ್ ಹುತಾತ್ಮರಾದರು. ರಷ್ಯಾದ ಸೇನೆಯು ಕ್ರೈಮಿಯಾವನ್ನು ನಾಶಪಡಿಸಲು ಇದ್ದು ಏಕಮಾತ್ರ ಮಾರ್ಗವೆಂದರೆ ಸೇತುವೆಯನ್ನು ಸ್ಫೋಟಿಸುವುದು ಎಂದು ಉಕ್ರೇನ್ ಸೇನೆ ನಿರ್ಧರಿಸಿತ್ತು. ಸ್ಕಕುನ್ಗೆ ಈ ಸ್ಪೋಟದಿಂದ ತಪ್ಪಿಸಿಕೊಳ್ಳಲು ಸಮಾಯವಕಾಶ ಸಿಗುವ ಮಾತೇ ಇರಲಿಲ್ಲ. ಆದರೂ ಅಂಜದ ಯೋಧ ಸ್ಕಕುನ್ ತನ್ನ ಸಹೋದ್ಯೋಗಿಗಳ ಬಳಿ ಈ ಸೇತುವೆಯನ್ನು ಸ್ಫೋಟಗೊಳಿಸಲು ನಾನು ಸಿದ್ಧನಿದ್ದೇನೆ ಎಂದು ಹೇಳಿದ್ದರು. ಬಳಿಕ ಅವರು ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಸೇನೆಯು ಅಧಿಕೃತ ಮಾಹಿತಿಯನ್ನು ನೀಡಿದೆ. ಸ್ಕಕುನ್ ಸೇತುವೆಯ ಮೇಲೆ ಸ್ಫೋಟಕಗಳನ್ನು ಇರಿಸಿದರು. ಸ್ಕಕುನ್ ಸ್ವಯಂಪ್ರೇರಿತರಾಗಿ ಈ ನಿರ್ಧಾರವನ್ನು ಕೈಗೊಂಡಿದ್ದರು ಎಂದು ಸಶಸ್ತ್ರ ಪಡೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸೇತುವೆಯನ್ನು ನಾಶಪಡಿಸಲಾಯ್ತು. ಆದರೆ ಸ್ಕಕುನ್ಗೆ ಈ ಸ್ಫೋಟದಿಂದ ಬಚಾವಾಗಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.