ಕೀವ್: ರಷ್ಯಾ ದಾಳಿಯಿಂದ ಕಂಗೆಟ್ಟಿರುವ ಉಕ್ರೇನ್ ಗೆ ವಿಶ್ವದ ದೊಡ್ಡಣ್ಣ ಅಮೆರಿಕ ನೆರವಿಗೆ ನಿಂತಿದೆ. ರಷ್ಯಾ ದಾಳಿಯನ್ನು ಖಂಡಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ರಷ್ಯಾ ಮೇಲೆ ತಾಂತ್ರಿಕ ಆಮದು ನಿರ್ಬಂಧ ಸೇರಿದಂತೆ ಹಲವು ನಿರ್ಬಂಧಗಳನ್ನು ಹೇರಿದ್ದಾರೆ. ಈ ನಡುವೆ ಉಕ್ರೇನ್ ಬೆಂಬಲಕ್ಕೆ ಬೈಡನ್ ನಿಂತಿದ್ದಾರೆ.
ರಷ್ಯಾ ನಿರಂತರ ಸಮರಕ್ಕೆ ನಲುಗಿರುವ ಯುದ್ಧಪೀಡಿತ ಉಕ್ರೇನ್ ಗೆ US $ 600 ಮಿಲಿಯನ್ ಭದ್ರತಾ ನೆರವು ಘೋಷಿಸಿದ್ದಾರೆ. ಅಂದರೆ ಸುಮಾರು 4,500 ಕೋಟಿ ಭದ್ರತಾ ನೆರವನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ನೀಡಿದ್ದಾರೆ.
BIG NEWS: ಭಾರತೀಯರ ರಕ್ಷಣೆಗೆ ತೊಡಕು; ವಿಮಾನಕ್ಕೆ ಸಿಗದ ಅನುಮತಿ
ಇದೇ ವೇಳೆ ಅಮೆರಿಕಾ, ಉಕ್ರೇನ್ ಅಧ್ಯಕ್ಷ ಝಲೆನ್ಸ್ಕಿ ಅವರಿಗೆ ಉಕ್ರೇನ್ ರಾಜಧಾನಿ ಕೀವ್ ನಿಂದ ಸ್ಥಳಾಂತರಗೊಳ್ಳುವಂತೆ ಸಲಹೆ ನೀಡಿದೆ. ಅಮೆರಿಕಾ ಸಲಹೆ ತಿರಸ್ಕರಿಸಿರುವ ಉಕ್ರೇನ್ ಅಧ್ಯಕ್ಷ, ಇಲ್ಲಿ ಯುದ್ಧ ನಡೆಯುತ್ತಿದೆ, ಹೋರಾಟ ಆರಂಭವಾಗಿದೆ. ನಮಗೆ ಮದ್ದು, ಗುಂಡುಗಳ ಅಗತ್ಯವಿದೆ ಹೊರತು ನಮ್ಮ ಮೇಲೆ ಸವಾರಿ ನಡೆಸುವುದು ಬೇಡ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ ಎಂದು ತಿಳಿದುಬಂದಿದೆ.