ಕೀವ್: ಉಕ್ರೇನ್ ನ ಕೀವ್ ನಗರದಲ್ಲಿ ಅಟ್ಟಹಾಸ ಮೆರೆಯುತ್ತಿರುವ ರಷ್ಯಾ, ಸೇನಾ ನೆಲೆ, ಜನನಿಬಿಡ ಪ್ರದೇಶ, ಆಸ್ಪತ್ರೆ, ಕಟ್ಟಡಗಳ ಮೇಲೆ ಬಾಂಬ್ ದಾಳಿ ನಡೆಸಿದೆ. ನಗರದಾದ್ಯಂತ ಬೆಂಕಿಯ ಕೆನ್ನಾಲಿಗೆ ವ್ಯಾಪಕವಾಗಿ ಹರಡಿರುವ ದೃಶ್ಯ ಯುದ್ಧದ ಭೀಕರತೆಯನ್ನು ಸಾರಿ ಹೇಳುತ್ತಿದೆ. ಈ ನಡುವೆ ಉಕ್ರೇನ್ ದಕ್ಷಿಣ ಭಾಗದಲ್ಲಿ ಬಂದರಿನ ಮೇಲೆ ರಷ್ಯಾ ರಾಕೆಟ್ ದಾಳಿ ನಡೆಸಿದೆ.
ಉಕ್ರೇನ್ ನ ಬ್ಲಾಕ್ ಸೀನಲ್ಲಿದ್ದ ಬಂದರಿನ ಮೇಲೆ ರಾಕೆಟ್ ದಾಳಿ ನಡೆಸಿದ್ದು, ಜಪಾನ್ ನ ಎರಡು ವಾಣಿಜ್ಯ ಹಡಗುಗಳು ಹಾಗೂ ಉಕ್ರೇನ್ ನ ಒಂದು ಹಡಗು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಜಪಾನ್ ನ ಎಂ.ವಿ ನಮುರಾ ಎಂಬ ಹಡಗು ಹಾಗೂ ಎಂ ವಿ ಮಿಲೇನಿಯಲ್ ಹಡಗುಗಳು ಧ್ವಂಸಗೊಂಡಿದ್ದು, ಸ್ಪಿರಿಟ್ ಕೆಮಿಕಲ್ ಟ್ಯಾಂಕರ್ ಗಳು ಈ ಹಡಗಿನಲ್ಲಿದ್ದವು ಎಂದು ತಿಳಿದುಬಂದಿದೆ.
ದಂಗಾಗಿಸುತ್ತೆ ಹಾರುತ್ತಿದ್ದ ಹೆಲಿಕಾಪ್ಟರ್ ನಲ್ಲಿ ಯುವಕ ಮಾಡಿದ ಸಾಹಸ….!
ರಷ್ಯಾದಿಂದ ಮೂರನೇ ದಿನದ ದಾಳಿ ಮುಂದುವರೆದಿದ್ದು, ಉಕ್ರೇನ್ ನ 211 ಮಿಲಿಟರಿ ಸ್ಟ್ರಕ್ಚರ್ ಗಳನ್ನು ಧ್ವಂಸಗೊಳಿಸಿದ್ದಾಗಿ ರಷ್ಯಾ ಸೇನೆ ತಿಳಿಸಿದೆ.