ಕೀವ್: ಉಕ್ರೇನ್ ಮೇಲೆ ಸತತ ಮೂರನೇ ದಿನವೂ ದಾಳಿ ಮುಂದುವರೆಸಿರುವ ರಷ್ಯಾ ಮಿಲಿಟರಿ ಪಡೆ ರಾಜಧಾನಿ ಕೀವ್ ವಶಕ್ಕೆ ಪಡೆಯಲು ಯತ್ನ ನಡೆಸಿದೆ. ಕೀವ್ ನಗರದ ಆಸ್ಪತ್ರೆ, ಕಟ್ಟಡಗಳ ಮೇಲೆ ಬಾಂಬ್ ದಾಳಿ ನಡೆಸಿ ಅಟ್ಟಹಾಸ ಮುಂದುವರೆಸಿರುವ ರಷ್ಯಾಸೇನೆಗೆ ಉಕ್ರೇನ್ ತಿರುಗೇಟು ನೀಡಿದೆ.
ರಷ್ಯಾದ ಶಸ್ತ್ರಾಸ್ತ್ರ ವಾಹನ, ಯುದ್ಧ ಟ್ಯಾಂಕರ್ ಗಳನ್ನು ಹೊಡೆದುರುಳಿಸಿರುವ ಉಕ್ರೇನ್ ಸೇನೆ, ಈವರೆಗೆ ಬರೋಬ್ಬರಿ 2,800ಕ್ಕೂ ಹೆಚ್ಚು ರಷ್ಯನ್ ಸೈನಿಕರನ್ನು ಹತ್ಯೆ ಮಾಡಿದ್ದಾಗಿ ತಿಳಿಸಿದೆ.
ರಷ್ಯಾ ನಡೆಸಿದ ಎರಡನೇ ದಿನದ ದಾಳಿಗೆ ಪ್ರತಿದಾಳಿ ನಡೆಸಲಾಗಿದ್ದು, ರಷ್ಯಾದ 2,800ಕ್ಕೂ ಹೆಚ್ಚು ಸೈನಿಕರನ್ನು ಹತ್ಯೆ ಮಾಡಿದ್ದೇವೆ. ರಷ್ಯಾ ದಾಳಿಗೆ ಉಕ್ರೇನ್ ನಲ್ಲಿಯೂ ಸಾಕಷ್ಟು ಸಾವುನೋವು ಸಂಭವಿಸಿದೆ. ಆದರೂ ಶರಣಾಗುವ ಪ್ರಶ್ನೆಯೇ ಇಲ್ಲ ಎಂದು ಉಕ್ರೇನ್ ತಿಳಿಸಿದೆ.
ಕಾಟನ್ ಕ್ಯಾಂಡಿಗೆ ಹಣದ ಬದಲು ಕೂದಲು…!
ಈವರೆಗೆ ರಷ್ಯಾದ 513 ಶಸ್ತ್ರಾಸ್ತ್ರ ವಾಹನಗಳು, 80 ಯುದ್ಧ ಟ್ಯಾಂಕರ್, 10 ಯುದ್ಧ ವಿಮಾನ ಹಾಗೂ 7 ಹೆಲಿಕಾಪ್ಟರ್ ಗಳನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ಉಪ ರಕ್ಷಣಾ ಸಚಿವೆ ಹನ್ನಾ ಮಲ್ಯಾರ್ ತಿಳಿಸಿದ್ದಾರೆ.
ಈ ನಡುವೆ ಉಕ್ರೇನ್ ಗೆ ಸಹಾಯಮಾಡಲು ತನ್ನ ಸೇನೆಯನ್ನು ಕಳುಹಿಸಲು ನ್ಯಾಟೋ ಸಜ್ಜಾಗಿದೆ. ಉಕ್ರೇನ್ ಮೇಲಿನ ರಷ್ಯಾ ಆಕ್ರಮಣಕಾರಿ ದಾಳಿಯನ್ನು ಸ್ವತ: ರಷ್ಯನ್ನರು ವಿರೋಧಿಸುತ್ತಿದ್ದು ಪ್ರತಿಭಟನೆ ನಡೆಸಿದ್ದಾರೆ. ಸ್ಪೇನ್, ಇಟಲಿ, ಜರ್ಮನ್, ಜಕ್ ಗಣರಾಜ್ಯ, ಚಿಲಿ ಸೇರಿದಂತೆ ಹಲವೆಡೆಗಳಲ್ಲಿ ಉಕ್ರೇನ್ ಮೇಲಿನ ದಾಳಿ ನಿಲ್ಲಿಸುವಂತೆ ಪ್ರತಿಭಟನೆಗಳು ಆರಂಭವಾಗಿವೆ.