alex Certify 50 ಅಡಿ ಆಳದ ಬಾವಿಗೆ ಬಿದ್ದಿದ್ದ ಚಿರತೆ ರಕ್ಷಣೆ…! ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

50 ಅಡಿ ಆಳದ ಬಾವಿಗೆ ಬಿದ್ದಿದ್ದ ಚಿರತೆ ರಕ್ಷಣೆ…! ವಿಡಿಯೋ ವೈರಲ್

ಕಾಡು ಪ್ರಾಣಿಗಳು ನಾಗರೀಕ ಸಮಾಜದೊಳಗೆ ಆಕಸ್ಮಿಕವಾಗಿ ಬಂದು ಸಿಲುಕಿಕೊಂಡು ಪರದಾಡುವ ಉದಾಹರಣೆಗಳು ಆಗಾಗ್ಗೆ ನಡೆಯುತ್ತಿರುತ್ತವೆ.

ಇಂಥದ್ದೇ ಒಂದು ಪ್ರಕರಣದಲ್ಲಿ ಮಹಾರಾಷ್ಟ್ರದಲ್ಲಿ 50 ಅಡಿ ಆಳದ ಬಾವಿಗೆ ಚಿರತೆಯೊಂದು ಬಿದ್ದ ಘಟನೆ ನಡೆದಿದೆ. ಆದರೆ, ಎಚ್ಚೆತ್ತ ಅರಣ್ಯಾಧಿಕಾರಿಗಳು ಮತ್ತು ವನ್ಯಜೀವಿ ಎಸ್‌ಒಎಸ್‌ ತಂಡ ಸಕಾಲದಲ್ಲಿ ಅದನ್ನು ರಕ್ಷಿಸಿದೆ.

ಪ್ಲಾಸ್ಟಿಕ್ ಡಬ್ಬಿಯೊಳಗೆ ತಲೆ ಸಿಲುಕಿಸಿಕೊಂಡು ಪರದಾಡುತ್ತಿದ್ದ ಚಿರತೆ ಮರಿ ರಕ್ಷಣೆ

ವೈಲ್ಡ್‌ಲೈಫ್ ಎಸ್‌ಒಎಸ್ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ತೋರಿಸುತ್ತದೆ.

ಬಾವಿಯಲ್ಲಿ ಇನ್ನೂ ಸ್ವಲ್ಪ ನೀರು ಇರುವುದರಿಂದ, ಚಿರತೆ ಬಹುತೇಕ ಮುಳುಗುವ ಸಾಧ್ಯತೆ ಇತ್ತು. ಆದಾಗ್ಯೂ, ವನ್ಯಜೀವಿ ಎಸ್‌ಒಎಸ್‌ನ ರಕ್ಷಕರ ತಂಡವು ತಕ್ಷಣವೇ ಸ್ಥಳಕ್ಕೆ ತಲುಪಿತು. ಅರಣ್ಯ ಇಲಾಖೆ ಅಧಿಕಾರಿಗಳ ನೆರವಿನೊಂದಿಗೆ ತಂಡ ಬೋನನ್ನು ಬಾವಿಗೆ ಇಳಿಸಿ ಚಿರತೆಯನ್ನು ರಕ್ಷಿಸಿತು.

ಚಿರತೆಯನ್ನು ಸುರಕ್ಷಿತವಾಗಿ ಹೊರತೆಗೆಯಲು ಬೋನನ್ನು ಕೆಳಗೆ ಇಳಿಸಲಾಯಿತು. ಚಿರತೆಗೆ ಯಾವುದೇ ಗಾಯಗಳಾಗಿಲ್ಲ ಎಂದು ಖಚಿತಪಡಿಸಿದ ನಂತರ, ಕಾಡಿನೊಳಗೆ ಬಿಡುಗಡೆ ಮಾಡಲಾಯಿತು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

Leopard rescued from drowning in 50-ft-deep well in Maharashtra. Watch video

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...