ಬೆಂಗಳೂರು: ಕಾಮದ ಮದದಲ್ಲಿ ಅಸಹಜ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಯುವಕನನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ಮೂಲದ 22 ವರ್ಷದ ವೆಂಕಟೇಶ ಬಂಧಿತ ಆರೋಪಿ ಎಂದು ಹೇಳಲಾಗಿದೆ. ಹಸುವಿನೊಂದಿಗೆ ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಆರೋಪಿಯನ್ನು ಬಂಧಿಸಲಾಗಿದೆ. ಸಿಂಗಾಪುರ ಲೇಔಟ್ ನಿವಾಸಿಯಾಗಿರುವ ಮುನಿ ಹನುಮಂತಪ್ಪ ಜಾನುವಾರುಗಳನ್ನು ಸಾಕಿದ್ದು, ಮನೆಯ ಮುಂದಿನ ಜಾಗದಲ್ಲಿ ಅವುಗಳನ್ನು ಕಟ್ಟುತ್ತಾರೆ. ಆರೋಪಿ ತಡರಾತ್ರಿ ಅಲ್ಲಿಗೆ ಬಂದು ಬಟ್ಟೆ ತೆಗೆದು ಅಸಹಜ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಇದನ್ನು ನೋಡಿದವರು ಹನುಮಂತಪ್ಪ ಅವರಿಗೆ ಮಾಹಿತಿ ನೀಡಿದ್ದಾರೆ.
ಫೆಬ್ರವರಿ 19ರಂದು ಮಧ್ಯರಾತ್ರಿ ಮತ್ತೆ ಅಲ್ಲಿಗೆ ಬಂದ ವೆಂಕಟೇಶ ಬಟ್ಟೆ ತೆಗೆದು ಹಸುವಿನೊಂದಿಗೆ ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಹನುಮಂತಪ್ಪ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯು ಪುಸ್ತಕ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೇಳಲಾಗಿದೆ.