ಫಿಟ್ನೆಸ್ ಬಗ್ಗೆ ಹೆಚ್ಚು ಆಸಕ್ತಿಯುಳ್ಳವರು ಜಿಮ್ ಅಥವಾ ಮನೆಯಲ್ಲಿ ವರ್ಕೌಟ್ ಮಾಡೋದು ಕಾಮನ್. ಹೆಲಿಕಾಪ್ಟರ್ ನಲ್ಲಿ ವ್ಯಾಯಾಮ ಮಾಡುವವರನ್ನು ನೀವೆಲ್ಲಾದ್ರೂ ನೋಡಿದ್ದೀರಾ? ಹೆಲಿಕಾಪ್ಟರ್ ಗೆ ನೇತಾಡಿಕೊಂಡೇ ಪುಲ್ ಅಪ್ಸ್ ಮಾಡ್ತಿರೋ ಯುವಕನ ವಿಡಿಯೋ ವೈರಲ್ ಆಗಿದೆ.
ಅರ್ಮೇನಿಯಾ ಮೂಲದ ರೋಮನ್ ಸಹೃದಯನ್ ಎಂಬಾತ ಒಂದು ನಿಮಿಷದಲ್ಲಿ 23 ಪುಲ್ ಅಪ್ಸ್ ಮಾಡಿದ್ದಾನೆ. ಈ ಹೆಲಿಕಾಪ್ಟರ್ ಪುಲ್ ಅಪ್ಸ್ ಮೂಲಕ ಗಿನ್ನಿಸ್ ವಿಶ್ವ ದಾಖಲೆ ಕೂಡ ನಿರ್ಮಿಸಿದ್ದಾನೆ.
ಆಗಸದಲ್ಲಿ ಹಾರುತ್ತಿದ್ದ ಹೆಲಿಕಾಪ್ಟರ್ ನ ಲ್ಯಾಂಡಿಂಗ್ ಸ್ಲೈಡ್ ಹಿಡಿದುಕೊಂಡು ರೋಮನ್ ಈ ಅಪಾಯಕಾರಿ ಸಾಹಸವನ್ನು ಮಾಡಿದ್ದಾನೆ. ಹೆಲಿಕಾಪ್ಟರ್ ಟೇಕಾಫ್ ಆದ ಬಳಿಕವೇ ರೋಮನ್ ಪುಲ್ ಅಪ್ಸ್ ಶುರು ಮಾಡಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
https://youtu.be/2JC5haMMKLA