ಉತ್ತರ ಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಪ್ರಚಾರ ಸಭೆಯಲ್ಲಿ ಮತದಾರರ ಮುಂದೆ ಕಿವಿ ಹಿಡಿದು ಉಟ್ ಬೈಸ್ ಮಾಡಿ ಕ್ಷಮೆ ಕೇಳಿದ ವಿಡಿಯೋ ವೈರಲ್ ಆಗಿದೆ.
ತಮ್ಮಮೇಲೆ ಜನರಿಗಿರುವ ಬೇಸರ ಅರಿತು ಶಾಸಕ ಭೂಪೇಶ್ ಚೌಬೆ ಕ್ಷಮೆ ಯಾಚಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಚೌಬೆ ಅವರು 2017 ರ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅವಿನಾಶ್ ಕುಶ್ವಾಹಾರನ್ನು ಸೋಲಿಸಿ ಮೊದಲ ಬಾರಿಗೆ ಶಾಸಕರಾಗಿದ್ದಾರೆ.
ಮತಗಟ್ಟೆ ಮುಂದೆ ನಿಂತರೂ ದಾಖಲೆಗಳಲ್ಲಿ ಮೃತಪಟ್ಟಿದ್ದಾರೆಂದು ವೃದ್ದನಿಗೆ ಮತದಾನ ಹಕ್ಕು ನಿರಾಕರಣೆ
ವೈರಲ್ ಆದ ವಿಡಿಯೋದ ನಾಟಕೀಯ ದೃಶ್ಯದಲ್ಲಿ ಜಾರ್ಖಂಡ್‌ನ ಮಾಜಿ ಆರೋಗ್ಯ ಸಚಿವ ಮತ್ತು ಶಾಸಕ ಭಾನು ಪ್ರತಾಪ್ ಶಾಹಿ ವೇದಿಕೆಯಲ್ಲಿರುವುದು ಕಾಣಿಸಿದೆ.
ಶಾಸಕ ಭೂಪೇಶ್ ಚೌಬೆ ಕುರ್ಚಿಯ ಮೇಲೆ ನಿಂತು, ಕಿವಿಗಳನ್ನು ಹಿಡಿದುಕೊಂಡು, ಕಳೆದ ಐದು ವರ್ಷಗಳಲ್ಲಿ ಮಾಡಿರುವ ಯಾವುದೇ ತಪ್ಪುಗಳಿಗಾಗಿ ಕ್ಷಮೆಯಾಚಿಸುತ್ತೇನೆ ಎಂದು ಉಟ್ ಬೈಸ್ ಮಾಡಿರುವುದು ವಿಡಿಯೋದಲ್ಲಿ ನೋಡಬಹುದಾಗಿದೆ.
ಇದು ಚುನಾವಣಾ ಗಿಮಿಕ್ ಅಥವಾ ನಿಜವಾದ ಪಶ್ಚಾತ್ತಾಪವೇ ಎಂಬುದು ಖಚಿತವಾಗಿಲ್ಲವಾದರೂ ಈ ವಿಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಅವರು ಕ್ಷಮೆ ಕೇಳಿದಾಗ ನೆರೆದಿದ್ದವರು ಅಭ್ಯರ್ಥಿಯನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದರು. ಚೌಬೆ ಮೊಬೈಲ್ ಕರೆ ಸ್ವೀಕರಿಸದೇ ಕ್ಷೇತ್ರದ ಕೆಲಸ ಮಾಡದೇ ನಿಷ್ಕ್ರಿಯರಾಗಿದ್ದ ಕಾರಣಕ್ಕೆ ಮತದಾರರು ಅಸಮಾಧಾನಗೊಂಡಿದ್ದರು ಎನ್ನಲಾಗಿದೆ.
BJP MLA holds ears and does sit-ups at UP election rally, asks people to forgive him; clip goes viral