ಬೆಂಗಳೂರು: ಜಾನುವಾರುಗಳಿಗೆ ಪ್ರತಿ ಗ್ರಾಮದಲ್ಲಿಯೂ ಸರ್ಕಾರಿ ಭೂಮಿಯನ್ನು ಗೋಮಾಳವಾಗಿ ಮೀಸಲಿಡುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಪ್ರತಿ 100 ಜಾನುವಾರುಗಳಿಗೆ 12 ಹೆಕ್ಟೇರ್ ಪ್ರದೇಶ ಸರ್ಕಾರಿ ಭೂಮಿಯನ್ನು ಗೋಮಾಳವಾಗಿ ಪ್ರತ್ಯೇಕವಾಗಿ ಕಾಯ್ದಿರಿಸಬೇಕು ಎಂದು ಹೇಳಲಾಗಿದೆ. ಪರಿಸ್ಥಿತಿಗೆ ಅನುಗುಣವಾಗಿ ಕಾಲಕಾಲಕ್ಕೆ ಗೋಮಾಳದ ವಿಸ್ತೀರ್ಣ ಹೆಚ್ಚಿದ್ದಲ್ಲಿ ಕಡಿಮೆ ಮಾಡಲು ಅವಕಾಶ ನೀಡಲಾಗಿದೆ. ಇದರ ಬಗ್ಗೆ ನಿರ್ಧಾರ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಗೋಮಾಳ ವಿಸ್ತೀರ್ಣದ ಅವಶ್ಯಕತೆ ಹೆಚ್ಚಾಗಿರುವ ಕಡೆ ಗೋಮಾಳ ಜಮೀನು ಹೆಚ್ಚಾಗಿ ಕಾಯ್ದಿರಿಸಬಹುದು. ಕಡಿಮೆಯಿದ್ದಲ್ಲಿ ಕಡಿಮೆ ಪ್ರಮಾಣ ಜಮೀನು ಕಾಯ್ದಿರಿಸಬಹುದು ಎಂದು ಹೇಳಲಾಗಿದೆ.
ಜಾನುವಾರುಗಳು ಮೇಯಲು ಅನುಕೂಲವಾಗುವಂತೆ ಅರಣ್ಯ ಪ್ರದೇಶವಿದ್ದರೆ ವಿಸ್ತೀರ್ಣಕ್ಕೆ ಅನುಗುಣವಾಗಿ ರಚಿತವಾಗಿರುವ ಪ್ರತ್ಯೇಕ ಪ್ರದೇಶ ಇದೆಯೆಂದು ಪರಿಗಣಿಸಬಹುದು. ಗೋಮಾಳ ಇಲ್ಲದ ಗ್ರಾಮದಲ್ಲಿ ಅಥವಾ ಕಡಿಮೆ ವಿಸ್ತೀರ್ಣದ ಭೂಮಿ ಇರುವಲ್ಲಿ ಪಕ್ಕದ ಗ್ರಾಮಗಳ ಸರ್ಕಾರಿ ಜಮೀನು ಗೋಮಾಳವಾಗಿ ಪ್ರತ್ಯೇಕವಾಗಿ ಇಡಬಹುದು ಎನ್ನಲಾಗಿದೆ.