alex Certify BIG NEWS: ನೋಟು ನಿಷೇಧಗೊಂಡ 6 ವರ್ಷಗಳ ಬಳಿಕ ವ್ಯಕ್ತಿಯೊಬ್ಬರಿಗೆ ಅಮಾನ್ಯಗೊಂಡ ನೋಟುಗಳ ಬದಲಾವಣೆಗೆ ಅವಕಾಶ; ಹೈಕೋರ್ಟ್ ಮಹತ್ವದ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನೋಟು ನಿಷೇಧಗೊಂಡ 6 ವರ್ಷಗಳ ಬಳಿಕ ವ್ಯಕ್ತಿಯೊಬ್ಬರಿಗೆ ಅಮಾನ್ಯಗೊಂಡ ನೋಟುಗಳ ಬದಲಾವಣೆಗೆ ಅವಕಾಶ; ಹೈಕೋರ್ಟ್ ಮಹತ್ವದ ಆದೇಶ

ನೋಟು ಅಮಾನ್ಯೀಕರಣಗೊಂಡು ಬರೋಬ್ಬರಿ ಆರು ವರ್ಷಗಳ ಬಳಿಕ ಮುಂಬೈ ನಿವಾಸಿಯೊಬ್ಬರಿಗೆ ಸೇರಿದ 1.6 ಲಕ್ಷ ರೂಪಾಯಿ ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳುವಂತೆ ಭಾರತೀಯ ರಿಸರ್ವ್​ ಬ್ಯಾಂಕ್​​ಗೆ ಬಾಂಬೆ ಹೈಕೋರ್ಟ್​ ವಿಭಾಗೀಯ ಪೀಠವು ನಿರ್ದೇಶನ ನೀಡಿದೆ.

ಮುಂಬೈನ ಡೊಂಬಿವಿಲಿ​​ ಪ್ರದೇಶದ ನಿವಾಸಿಯಾದ ಕಿಶೋರ್​​ ಸೊಹೊನಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಗೌತಮ್​ ಪಟೇಲ್ ಹಾಗೂ ಮಾಧವ್​ ಜಾಮ್ದಾರ್​​ ಈ ಆದೇಶವನ್ನು ನೀಡಿದ್ದಾರೆ. 2016ರ ಮಾರ್ಚ್​ ತಿಂಗಳಲ್ಲಿ ನಡೆದ ಪ್ರಕರಣವೊಂದರಲ್ಲಿ ಆರೋಪಿಗಳಿಗೆ 1.6 ಲಕ್ಷ ರೂಪಾಯಿಗಳನ್ನು ಸ್ಥಳೀಯ ಪೊಲೀಸ್​ ಠಾಣೆಗಳಲ್ಲಿ ಠೇವಣಿ ನೀಡುವಂತೆ ಕಲ್ಯಾಣ್​ ಮ್ಯಾಜಿಸ್ಟ್ರೇಟ್​​​ ಸೂಚನೆ ನೀಡಿದ್ದರು.

2016ರ ನವೆಂಬರ್​ 8ರಂದು ಕೇಂದ್ರ ಸರ್ಕಾರವು ನೋಟು ಅಮಾನ್ಯೀಕರಣವನ್ನು ಘೋಷಣೆ ಮಾಡಿದೆ. ಹಳೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು 2016ರ ಡಿಸೆಂಬರ್​ 31ರವರೆಗೆ ಮಾತ್ರ ಕಾಲಾವಕಾಶ ಇದ್ದಿದ್ದರಿಂದ ಈ ಗಡುವಿನ ಒಳಗಾಗಿ ಹಣವನ್ನು ಸಂಗ್ರಹಿಸಲು ಜಿಲ್ಲಾ ಮ್ಯಾಜಿಸ್ಟ್ರೇಟ್​​ ರನ್ನು ಸೊಹೊನಿ ಮನವಿ ಮಾಡಿದರೂ ಸಹ ಅವರು 2017ರ ಮಾರ್ಚ್​ 20ರಂದು ಹಣವನ್ನು ನೀಡಿದ್ದರು.

ಸೊಹೊನಿ ತಮ್ಮ ಅರ್ಜಿಯಲ್ಲಿ ನಮಗೆ ಹಣದ ತುರ್ತು ಅಗತ್ಯವಿಲ್ಲ. ಇದನ್ನು ನಾವು ಉಳಿತಾಯವೆಂದು ಪರಿಗಣಿಸುವುದಾಗಿ ಹೇಳಿದ್ದರು. 2020ರ ಲಾಕ್​ಡೌನ್​ ಅವಧಿ ಮುಗಿದ ಬಳಿಕ ಅಕ್ಟೋಬರ್​ ತಿಂಗಳಲ್ಲಿ ಪೊಲೀಸ್​ ಠಾಣೆಗೆ ಹಿಂತಿರುಗಿದಾಗ ಅವರಿಗೆ ಅಮಾನ್ಯೀಕರಣಗೊಂಡ 1000 ರೂಪಾಯಿಯ ನೋಟುಗಳನ್ನು ನೀಡಲಾಯಿತು. ಇದನ್ನು ಸೊಹೊನಿ ಗಾಂಧಿಜಿಯ ಫೋಟೋ ಇರುವ ಕಾಗದದ ತುಂಡು ಎಂದು ವ್ಯಂಗ್ಯವಾಡಿದ್ದಾರೆ.

ಪೊಲೀಸ್​ ಅಧಿಕಾರಿಗಳ ಬಳಿ ಇರುವ ನೋಟು ಸುರಕ್ಷಿತವಾಗಿದೆ ಎಂದು ನಾನು ಭಾವಿಸಿದ್ದೆ ಎಂದು ಸೊಹೊನಿ ಹೇಳಿದ್ದಾರೆ. ಆರ್​ಬಿಐ ಪರ ವಕೀಲರಾದ ಅದಿತಿ ಫಾಟಕ್​​ ಹಣಕಾಸು ಸಚಿವಾಲಯದ 2017ರ ಮೇ 12ನೆ ತಾರೀಖಿನ ಅಧಿಸೂಚನೆಯನ್ನು ಉಲ್ಲೇಖಿಸಿ ಮುಟ್ಟುಗೋಲು ಹಾಕಲಾದ ನೋಟುಗಳನ್ನು ನ್ಯಾಯಾಲಯವು ಬ್ಯಾಂಕ್​ಗೆ ಹಿಂದಿರುಗಿಸಿದರೆ ಆಗ ಹಣ ವಿನಿಮಯ ಮಾಡಿಕೊಳ್ಳಬಹುದು ಎಂದಿದ್ದಾರೆ.

ವಾದ – ವಿವಾದಗಳನ್ನು ಆಲಿಸಿದ ಕೋರ್ಟ್, ಅರ್ಜಿದಾರರ ಹಣವನ್ನು ಪ್ರಸ್ತುತ ಮಾನ್ಯವಾಗಿರುವ ನೋಟುಗಳ ಜೊತೆಯಲ್ಲಿ ಆರ್​ಬಿಐ ವಿನಿಮಯ ಮಾಡಿಕೊಡುವಂತೆ ಸೂಚನೆ ನೀಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...