alex Certify ಪುಣೆ ಹಾಗೂ ಮುಂಬೈನ ಈ ಸ್ಥಳಗಳಲ್ಲಿ ನಡೆಯಲಿದೆ ಐಪಿಎಲ್​ ಪಂದ್ಯ; ಮೇ 29ರಂದು ಫೈನಲ್​ ಕದನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಣೆ ಹಾಗೂ ಮುಂಬೈನ ಈ ಸ್ಥಳಗಳಲ್ಲಿ ನಡೆಯಲಿದೆ ಐಪಿಎಲ್​ ಪಂದ್ಯ; ಮೇ 29ರಂದು ಫೈನಲ್​ ಕದನ

2022ನೇ ಸಾಲಿನ ಇಂಡಿಯನ್ ಪ್ರೀಮಿಯರ್​ ಲೀಗ್​​ನ್ನು ಮುಂಬೈ ಮತ್ತು ಪುಣೆಯ ನಾಲ್ಕು ಸ್ಥಳಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ವರ್ಷದ ಐಪಿಎಲ್​ ಫೈನಲ್​ ಪಂದ್ಯ ಮೇ 29ರಂದು ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ ಅಧಿಕೃತ ಮಾಹಿತಿಯನ್ನು ನೀಡಿದೆ.

ಐಪಿಎಲ್​ ಚೇರ್ಮನ್​​ ಬ್ರಿಜೇಶ್​ ಪಟೇಲ್​ ಮಾರ್ಚ್​ 26ರಿಂದ ಐಪಿಎಲ್​ ಪಂದ್ಯವು ಆರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದರು. ಈ ಬಾರಿ ಐಪಿಎಲ್​ನಲ್ಲಿ ಎರಡು ಹೊಸ ತಂಡಗಳಾದ ಲಕ್ನೋ ಸೂಪರ್​ ಜೈಂಟ್ಸ್​ ಹಾಗೂ ಗುಜರಾತ್​ ಟೈಟನ್ಸ್​ ಸೇರ್ಪಡೆಯಾಗಿದೆ.

ಈ ಸಂಬಂಧ ಗುರುವಾರದಂದು ಸಭೆ ಕರೆದಿದ್ದ ಐಪಿಎಲ್​ ಆಡಳಿತ ಮಂಡಳಿಯು ಟಾಟಾ ಐಪಿಎಲ್​ 2022ಕ್ಕೆ ಸಂಬಂಧಿಸಿದಂತೆ ಅನೇಕ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.

ಕೋವಿಡ್​ 19 ಸೋಂಕನ್ನು ಗಮನದಲ್ಲಿಟ್ಟುಕೊಂಡು ಇಂಡಿಯನ್​ ಪ್ರೀಮಿಯರ್ ಲೀಗ್​ನ 15ನೇ ಆವೃತ್ತಿಯು ಬಯೋ ಸೆಕ್ಯೂರ್​​ ಪರಿಸರದಲ್ಲಿ ಆಡಲಿಸಲಾಗುತ್ತದೆ ಎಂದು ಹೇಳಿದೆ. ಪಂದ್ಯಾವಳಿಯು ಮಾರ್ಚ್​ 26ರಿಂದ ಆರಂಭಗೊಳ್ಳಲಿದೆ. ಹಾಗೂ ಮೇ 29ರಂದು ಅಂತಿಮ ಪಂದ್ಯವು ಇರಲಿದೆ.

ಒಟ್ಟು 70 ಲೀಗ್​ಗಳು ಇರಲಿದ್ದು ಮುಂಬೈ ಹಾಗೂ ಪುಣೆ ನಾಲ್ಕು ಅಂತಾರಾಷ್ಟ್ರೀಯ ಗುಣಮಟ್ಟದ ಮೈದಾನಗಳಲ್ಲಿ ಆಡಲಾಗುತ್ತದೆ. ಫ್ಲೇ ಆಫ್​ ಸ್ಥಳಗಳನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಬಿಸಿಸಿಐ ಅಧಿಕೃತ ಪ್ರಕಟಣೆ ನೀಡಿದೆ.

ಮುಂವೈನ ವಾಂಖೆಡೆ ಸ್ಟೇಡಿಯಂ ಹಾಗೂ ಡಿವೈ ಪಾಟೀಲ್​ ಸ್ಟೇಡಿಯಂ ತಲಾ 20 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಮುಂಬೈನ ಬ್ರಬೋರ್ನ್​ ಸ್ಟೇಡಿಯಂ ಹಾಗೂ ಪುಣೆಯ ಎಂಸಿಎ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ತಲಾ 15 ಪಂದ್ಯಗಳು ನಡೆಯಲಿವೆ.

ಪ್ರತಿಯೊಂದು ಐಪಿಎಲ್​ ತಂಡವು ತಲಾ ನಾಲ್ಕು ಪಂದ್ಯಗಳನ್ನು ವಾಂಖೆಡೆ ಹಾಗೂ ಡಿವೈ ಪಾಟೀಲ್​ ಸ್ಟೇಡಿಯಂನಲ್ಲಿ ಆಡಲಿವೆ. ತಲಾ ಮೂರು ಪಂದ್ಯಗಳನ್ನು ಬ್ರಬೋರ್ನ್​ ಸ್ಟೇಡಿಯಂ ಹಾಗೂ ಪುಣೆಯ ಎಂಸಿಎ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಆಡಲಿದೆ.

10 ತಂಡಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.

ಗ್ರೂಪ್​ ಎ : ಮುಂಬೈ ಇಂಡಿಯನ್ಸ್​, ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್​, ದೆಹಲಿ ಕ್ಯಾಪಿಟಲ್ಸ್​, ಲಕ್ನೋ ಸೂಪರ್​ ಜೈಂಟ್ಸ್​

ಗ್ರೂಪ್​ ಬಿ : ಚೆನ್ನೈ ಸೂಪರ್​ ಕಿಂಗ್ಸ್​, ಸನ್​ರೈಸರ್ಸ್​ ಹೈದರಾಬಾದ್​, ರಾಯಲ್​ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್​ ಕಿಂಗ್ಸ್​ ಹಾಗೂ ಗುಜರಾತ್​ ಟೈಟಾನ್ಸ್​

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...