ಇಡೀ ವಿಶ್ವದಲ್ಲೆ ಜನಪ್ರಿಯವಾಗಿರೊ ಕೆ-ಪಾಪ್ ಬ್ಯಾಂಡ್ ಬಿಟಿಎಸ್ನ, ಭಾರತೀಯ ಅಭಿಮಾನಿಗಳು ರಾಪರ್-ಗೀತರಚನೆಕಾರ ಸುಗಾ ಅವರ ಸ್ಪಾಟಿಫೈ ಖಾತೆಯನ್ನು ಯಾರೋ ಭಾರತೀಯರೊಬ್ಬರು ಹ್ಯಾಕ್ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸುಗಾ ಅಭಮಾನಿಗಳಿಗೆ, ಆತ ರಚಿಸಿರುವ ಸಂಗೀತವನ್ನು ಕೇಳಲು ಇಷ್ಟಪಡುವವರಿಗೆ, ಅವರ ಸ್ಪಾಟಿಫೈ ಖಾತೆ ಮತ್ತು ಅದರಲ್ಲಿರುವ ಹಾಡುಗಳ ಲಿಸ್ಟ್ ಬಗ್ಗೆ ಸ್ಪಷ್ಟವಾಗಿ ತಿಳಿದಿರುತ್ತದೆ. ಹೀಗೆ ಬಿಟಿಎಸ್ ಅಭಿಮಾನಿಗಳು ಸುಗಾ ಅವರ ಸ್ಪಾಟಿಫೈ ಖಾತೆ, “ಸುಗಾ ಸಾಂಗ್” ನೋಡಿ ಆಶ್ಚರ್ಯಗೊಂಡಿದ್ದಾರೆ. ಏಕೆಂದರೆ ಅವರ ಹಾಡುಗಳ ಸಾಲಿನಲ್ಲಿ ಹೊಸ ಟ್ರ್ಯಾಕ್ ಒಂದು ಸೇರಿದ್ದು ಅದು ಭಾರತದ ‘ಭೋಜ್ಪುರಿ’ ಗೀತೆ. ಅಷ್ಟೇ ಅಲ್ಲಾ ಅದು ದೇವನಾಮವಾಗಿದ್ದು, ಶಿವನ ಕುರಿತ ಭಜನೆ ಎಂಬುದು ಗಮನಾರ್ಹ.
BIG NEWS: ಉಕ್ರೇನ್ ಗೆ ಶಾಕ್ ಮೇಲೆ ಶಾಕ್; ರಷ್ಯಾದಿಂದ ನಿರಂತರ ಸೈಬರ್ ಅಟ್ಯಾಕ್, ಸರ್ಕಾರಿ ಇಲಾಖೆ, ಬ್ಯಾಂಕ್ ವೆಬ್ ಸೈಟ್ ಗಳೇ ಟಾರ್ಗೆಟ್
ಇದನ್ನು ನೋಡಿದ ಅಭಿಮಾನಿಗಳು ಯಾರೋ ಭಾರತೀಯನೆ ಸುಗಾ ಖಾತೆಯನ್ನ ಹ್ಯಾಕ್ ಮಾಡಿರಬೇಕೆಂದು ಊಹಿಸಿದ್ದಾರೆ. ಈ ಬಗ್ಗೆ ಬಿಟಿಎಸ್ ಬ್ಯಾಂಡ್ ನ ಭಾರತೀಯ ಅಭಿಮಾನಿಗಳು ಇನ್ಸ್ಟಾಗ್ರಾಮ್, ಟ್ವಿಟ್ಟರ್ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ಸುಗಾ ಖಾತೆ ಹ್ಯಾಕ್ ಆಗಿದೆಯೇ ಎಂದು ಪ್ರಶ್ನಿಸುತ್ತಿದ್ದಾರೆ. ಜೊತೆಗೆ ಹಲವು ಮೀಮ್ ಗಳು ಸಹ ಮೂಡಿ ಬರುತ್ತಿವೆ.
ಇನ್ನು ಒಂದುಹೆಜ್ಜೆ ಮುಂದೆ ಹೋದ ಕೆಲವು ಅಭಿಮಾನಿಗಳು, ಸ್ಪಾಟಿಫೈ ಅನ್ನು ಪ್ರಶ್ನಿಸಿದ್ದಾರೆ. ಸುಗಾ ಖಾತೆಯಲ್ಲಿ ಭೋಜ್ಪುರಿ ಹಾಡು ! ತಕ್ಷಣ ಖಾತೆಯನ್ನು ಸರಿಪಡಿಸಿ ಎಂದು ಸ್ಪಾಟಿಫೈನ ಅಧಿಕೃತ ಟ್ವಿಟ್ಟತ್ ಹ್ಯಾಂಡಲ್ ಅನ್ನು ಟ್ಯಾಗ್ ಮಾಡಿ ಮನವಿ ಮಾಡಿಕೊಂಡಿದ್ದಾರೆ.