ಕೈವಾ: ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಒಂದೆಡೆ ಸೇನಾದಾಳಿ ನಡೆಸಿದ್ದರೆ ಇನ್ನೊಂದಡೆ ಸೈಬರ್ ಅಟ್ಯಾಕ್ ಮಾಡಿದೆ. ಉಕ್ರೇನ್ ಬ್ಯಾಂಕ್ ಗಳು, ಸಚಿವಾಲಯದ ವೆಬ್ ಸೈಟ್ ಗಳ ಮೇಲೆ ದಾಳಿ ನಡೆಸಿದೆ.
ಉಕ್ರೇನ್ ನ ವಿದೇಶಾಂಗ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ಸರ್ಕಾರಿ ವೆಬ್ ಸೈಟ್ ಗಳನ್ನು, ಸಚಿವರ ಖಾತೆಗಳನ್ನು ಹ್ಯಾಕ್ ಮಾಡಿರುವ ರಷ್ಯಾ ಎಲ್ಲಾ ರೀತಿಯಲ್ಲಿಯೂ ಉಕ್ರೇನ್ ಕಟ್ಟಿಹಾಕಲು ಯತ್ನ ನಡೆಸಿದೆ.
ಉಕ್ರೇನ್ ರಾಜಧಾನಿ ಕೈವಾ ಸೇರಿದಂತೆ ಪ್ರಮುಖ ಪ್ರದೇಶಗಳ ಮೇಲೆ ರಷ್ಯಾ ಮಿಲಿಟರಿ ಪಡೆದಾಳಿ ನಡೆಸುತ್ತಿದ್ದಂತೆ ತಿರುಗೇಟು ನೀಡಿರುವ ಉಕ್ರೇನ್ ಸೇನೆ ರಷ್ಯಾ ಸೇನಾ ನೆಲೆ, ಬಂಕರ್ ಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಈ ನಡುವೆ ರಷ್ಯಾ ಸೇನೆಯ 5 ಹೆಲಿಕಾಪ್ಟರ್ ಗಳನ್ನು ಹೊಡೆದುರುಳಿಸಿದೆ. ರಷ್ಯಾ-ಉಕ್ರೇನ್ ನಡುವೆ ಯುದ್ಧ ಘೋಷಣೆ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.