
ಅಡುಗೆ ಮಾಡುವುದೆಂದ್ರೆ ಈಗಿನ ಯುವತಿಯರಂತೂ ಮಾರುದೂರ ಓಡುತ್ತಾರೆ. ತನಗೆ ಟೀ ಕೂಡ ಮಾಡಲು ಬರುವುದಿಲ್ಲ ಎಂಬಂತಹ ಮಾತುಗಳು ಕೇಳಿ ಬರುತ್ತಿರುತ್ತದೆ. ಅಂಥಾದ್ರಲ್ಲಿ ಇಲ್ಲೊಬ್ಬ ಪುಟ್ಟ ಪೋರ ಸಲೀಸಾಗಿ ರೊಟ್ಟಿ ಬೇಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೂರು ವರ್ಷದ ಪುಟ್ಟ ಬಾಲಕ ಅಡುಗೆ ಮನೆಯಲ್ಲಿ ಸ್ಟೌ ಮುಂದೆ ನಿಂತುಕೊಂಡು ರೊಟ್ಟಿಯನ್ನು ಬೇಯಿಸಿದ್ದಾನೆ. ನಮ್ಮಲ್ಲಿ ಅನೇಕರು ರೊಟ್ಟಿ ತಿರುಗಿಸಲು ಕಷ್ಟಪಡುವವರಿದ್ದರೆ, ಈ ಬಾಲಕ ಮಾತ್ರ ಸಲೀಸಾಗಿ ರೊಟ್ಟಿಯನ್ನು ತಿರುಗಿಸಿದ್ದಾನೆ. ಬಾಲಕನ ತಂದೆ ಸುಜಯ್ ನಾಡಕರ್ಣಿ ಇನ್ಸ್ಟಾಗ್ರಾಮ್ ನಲ್ಲಿ ಈ ಮುದ್ದಾದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದು ಒಂದು ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ, ಕಬೀರ್ ತನ್ನ ತಂದೆಯ ಮಾರ್ಗದರ್ಶನದಲ್ಲಿ ಅಡುಗೆಮನೆಯಲ್ಲಿ ನಿಂತುಕೊಂಡು ಅಡುಗೆ ಮಾಡುವುದನ್ನು ಕಾಣಬಹುದು. ಸೌಟು ಹಿಡಿದುಕೊಂಡು ಒಲೆಯಲ್ಲಿಟ್ಟ ರೊಟ್ಟಿಯನ್ನು ಬಾಲಕ ಸಲೀಸಾಗಿ ತಿರುಗಿಸಿದ್ದಾನೆ. ಕಬೀರ್ ಗೆ ಅಡುಗೆ ಮಾಡುವುದೆಂದರೆ ಬಲು ಇಷ್ಟವಂತೆ. ಹೀಗಾಗಿ ಆತನ ಪೋಷಕರು ಅಡುಗೆ ಮಾಡಲು ಬಾಲಕನಿಗೆ ಒಂದು ಅವಕಾಶವನ್ನು ನೀಡಿದ್ದಾರೆ.
ಈ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದ್ದು, ಬಾಲಕನ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಲಕನನ್ನು ಬಹಳ ಚೆನ್ನಾಗಿ ಬೆಳೆಸುತ್ತಿದ್ದೀರಿ ಅಂತಾ ಪೋಷಕರನ್ನು ಶ್ಲಾಘಿಸಿದ್ದಾರೆ.
https://youtu.be/TvUIsl55XXE