ರಷ್ಯಾ-ಉಕ್ರೇನ್ ನಡುವಿನ ಬಿಕ್ಕಟ್ಟು ಜಗತ್ತಿನಾದ್ಯಂತ ಹಲವಾರು ಇತರ ದೇಶಗಳ ನಡುವೆ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಉಭಯ ದೇಶಗಳ ನಡುವಿನ ಬಿಕ್ಕಟ್ಟಿನಿಂದಾಗಿ ಜಾಗತಿಕ ಆರ್ಥಿಕತೆಯಲ್ಲಿ ನಡುಕ ಉಂಟಾಗಿದೆ. ಈ ಸಮಸ್ಯೆಯನ್ನು ಇತರ ದೇಶಗಳ ನಾಯಕರು ಗಂಭೀರವಾಗಿ ಪರಿಗಣಿಸಿದ್ದಾರೆ.
ಈ ಉದ್ವಿಗ್ನತೆಯ ನಡುವೆಯೂ ನೆಟ್ಟಿಗರು ಜನಪ್ರಿಯ ಅನಿಮೇಟೆಡ್ ಸರಣಿ ‘ದಿ ಸಿಂಪ್ಸನ್ಸ್’ನ ದೃಶ್ಯವೊಂದನ್ನು ಆನ್ಲೈನ್ ನಲ್ಲಿ ಹಂಚಿಕೊಂಡಿದ್ದು, ಭಾರಿ ವೈರಲ್ ಆಗಿದೆ. ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಜಗಳದಂತಿರುವ ಕಾರ್ಟೂನ್ ವಿಡಿಯೋ ಇಂಟರ್ನೆಟ್ ನಲ್ಲಿ ಸದ್ದು ಮಾಡುತ್ತಿದೆ.
1998 ರಲ್ಲಿ ಈ ಸಂಚಿಕೆ ಪ್ರಸಾರವಾಗಿತ್ತು. ಇದೀಗ ಮತ್ತೆ ಇಂಟರ್ನೆಟ್ ನಲ್ಲಿ ಕಾಣಿಸಿಕೊಂಡಿದೆ. ಇದರಲ್ಲಿ ರಷ್ಯಾದ ಪ್ರತಿನಿಧಿಯು ವಿಶ್ವಸಂಸ್ಥೆಯಲ್ಲಿ ಉಕ್ರೇನ್ ಬಗ್ಗೆ ತಮ್ಮ ಕಳವಳವನ್ನು ತಿಳಿಸುವುದನ್ನು ತೋರಿಸುತ್ತದೆ. ಪ್ರತಿನಿಧಿಯು ತನ್ನ ಮುಂದೆ ಇರುವ ಪ್ಲೇಸ್-ಬೋರ್ಡ್ ಅನ್ನು ಸೋವಿಯತ್ ಒಕ್ಕೂಟ ಎಂದು ತ್ವರಿತವಾಗಿ ಬದಲಾಯಿಸುತ್ತಾನೆ. ಪ್ರಸ್ತುತ ಎರಡೂ ದೇಶಗಳ ನಡುವಿನ ಪರಿಸ್ಥಿತಿಯನ್ನು ಇದರಲ್ಲಿ ಕಾಣಬಹುದು. ಹೀಗಾಗಿ ಸಿಂಪ್ಸನ್ಸ್ 1998ರಲ್ಲೇ ಎರಡು ದೇಶಗಳ ನಡುವೆ ಬಿಕ್ಕಟ್ಟು ಉಂಟಾಗುತ್ತದೆ ಎಂಬ ಬಗ್ಗೆ ಭವಿಷ್ಯ ನುಡಿದಿರುವುದಾಗಿ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ.
ರಷ್ಯಾ-ಉಕ್ರೇನ್ ನಡುವಿನ ಒಪ್ಪಂದವನ್ನು 24 ವರ್ಷಗಳ ಹಿಂದೆ ಅಂದರೆ, 1997 ರಲ್ಲಿ ಸಹಿ ಮಾಡಲಾಯಿತು. ಇದು 1999 ರಲ್ಲಿ ಜಾರಿಗೆ ಬಂದಿತು. ಈ ಒಪ್ಪಂದವು ಉಕ್ರೇನ್ ಮತ್ತು ರಷ್ಯಾಗಳನ್ನು ಕ್ರಮವಾಗಿ ಪರಸ್ಪರರ ಮೇಲೆ ಆಕ್ರಮಣ ಮಾಡದಂತೆ ಮತ್ತು ಯುದ್ಧವನ್ನು ಘೋಷಿಸುವುದನ್ನು ತಡೆಯಿತು. ಇದೀಗ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಈ ಒಪ್ಪಂದವು ಇನ್ನು ಮುಂದೆ ಅಸ್ತಿತ್ವದಲ್ಲಿರುವುದಿಲ್ಲ ಎಂದು ಘೋಷಿಸಿದ್ದಾರೆ.
https://twitter.com/GeniusManushya/status/1496003007313772547?ref_src=twsrc%5Etfw%7Ctwcamp%5Etweetembed%7Ctwterm%5E1496003007313772547%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthe-internet-thinks-the-simpsons-predicted-the-russia-ukraine-crisis-in-1998-watch-viral-video-1916886-2022-02-23