alex Certify 9 – 12 ನೇ ತರಗತಿ ವಿದ್ಯಾರ್ಥಿಗಳಿಗೆ ‘ಕೋಡಿಂಗ್ ಸ್ಪರ್ಧೆ’; ವಿಜೇತರಿಗೆ ಸಿಗಲಿದೆ 3 ಲಕ್ಷ ರೂಪಾಯಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

9 – 12 ನೇ ತರಗತಿ ವಿದ್ಯಾರ್ಥಿಗಳಿಗೆ ‘ಕೋಡಿಂಗ್ ಸ್ಪರ್ಧೆ’; ವಿಜೇತರಿಗೆ ಸಿಗಲಿದೆ 3 ಲಕ್ಷ ರೂಪಾಯಿ…!

ಕೋಡಿಂಗ್ HPE CodeWars 2022 ನ್ನು ಪ್ರಕಟಿಸಿದೆ.ಇದು ಹೈಸ್ಕೂಲ್​ ವಿದ್ಯಾರ್ಥಿಗಳಿಗೆ ಹ್ಯಾಕಥಾನ್​ ಹಾಗೂ ಕೋಡಿಂಗ್​ ಸ್ಪರ್ಧೆಯಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿದವರು HPE ಮತ್ತು STEM.org ಗುರುತಿನ ಪ್ರಮಾಣಪತ್ರಗಳೊಂದಿಗೆ HPE ಯಿಂದ 3,00,000 ರೂಪಾಯಿ ಬಹುಮಾನವನ್ನು ಗೆಲ್ಲುವ ಅವಕಾಶವನ್ನು ಪಡೆಯುತ್ತಾರೆ. ಅಲ್ಲದೇ ಇವರಿಗೆ ಹೆಚ್​​ಪಿಇ ತಂತ್ರಜ್ಞರು ಮಾರ್ಗದರ್ಶನ ನೀಡುತ್ತಾರೆ.

ಈ ಸ್ಪರ್ಧೆಯ ವಿಜೇತರು HPE ಸ್ಪೇಸ್‌ಬೋರ್ನ್ ಕಂಪ್ಯೂಟರ್-2 (SBC-2), ಪ್ರಸ್ತುತ ಬಾಹ್ಯಾಕಾಶದಲ್ಲಿರುವ ಎಡ್ಜ್ ಕಂಪ್ಯೂಟರ್‌ನೊಂದಿಗೆ ಸಂವಹನ ನಡೆಸುವ ಅವಕಾಶವನ್ನು ಹೊಂದಿರುತ್ತಾರೆ.

ಆರು ವಿಜೇತರು ಪ್ರಸ್ತುತ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ನಲ್ಲಿರುವ HPE ಯ ಸ್ಪೇಸ್‌ಬೋರ್ನ್ ಕಂಪ್ಯೂಟರ್-2 (SBC-2) ನಲ್ಲಿ ಕೋಡ್ ಬರೆಯಲು ಮತ್ತು ಪ್ರಯೋಗ ಮಾಡಲು ಅವಕಾಶವನ್ನು ಪಡೆಯುತ್ತಾರೆ. ಸ್ಪರ್ಧೆಯು 9 ರಿಂದ 12 ನೇ ತರಗತಿಗಳಿಗೆ ಮತ್ತು ಏಪ್ರಿಲ್ 9 ರಿಂದ ಪ್ರಾಯೋಗಿಕವಾಗಿ ನಡೆಯಲಿದೆ. ಈ ಸ್ಫರ್ಧೆಗೆ ನೋಂದಣಿ ಉಚಿತವಾಗಿದೆ.

ಭಾರತದಾದ್ಯಂತ 500 ಶಾಲೆಗಳಿಂದ 10,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಹೆವ್ಲೆಟ್-ಪ್ಯಾಕರ್ಡ್ ಎಂಟರ್‌ಪ್ರೈಸ್ ಸಹಯೋಗದೊಂದಿಗೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಮತ್ತು ಕೋಡ್ ಕಲಿಯಲು ಮತ್ತು ನೈಜ ಜೀವನದ ಸಮಸ್ಯೆಗಳಿಗೆ ನವೀನ ಪರಿಹಾರಗಳನ್ನು ಕಂಡುಹಿಡಿಯಲು ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಗುರಿಯನ್ನು ಇದು ಹೊಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...