alex Certify ಮ್ಯೂಸಿಯಂ ಆಫ್ ದಿ ಫ್ಯೂಚರ್; ಭೂಮಿ ಮೇಲಿನ ಅತ್ಯಂತ ಸುಂದರ ಕಟ್ಟಡದ ಉದ್ಘಾಟನೆ‌ ಮಾಡಿದ ದುಬೈ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮ್ಯೂಸಿಯಂ ಆಫ್ ದಿ ಫ್ಯೂಚರ್; ಭೂಮಿ ಮೇಲಿನ ಅತ್ಯಂತ ಸುಂದರ ಕಟ್ಟಡದ ಉದ್ಘಾಟನೆ‌ ಮಾಡಿದ ದುಬೈ…!

ಜಾಗತಿಕ ಮಟ್ಟದಲ್ಲಿ ಹಲವು ಮೊದಲುಗಳ ಹಾಗೂ ಸಾಕಷ್ಟು ವಿಶ್ವದಾಖಲೆಗಳನ್ನು ತನ್ನದಾಗಿಸಿಕೊಂಡಿರುವ ದುಬೈ, ಈಗ ಮತ್ತೊಂದು ದಾಖಲೆ ಬರೆದಿದೆ. ಜಗತ್ತಿನ‌ ಅತಿ ಸುಂದರವಾದ ಕಟ್ಟಡ ಎಂದು ಬಣ್ಣಿಸಲಾಗಿರುವ ಮ್ಯೂಸಿಯಂ ಒಂದನ್ನು ಮಂಗಳವಾರ ಉದ್ಘಾಟನೆ ಮಾಡಿದೆ.

ದುಬೈನಲ್ಲಿ, ಮ್ಯೂಸಿಯಂ ಆಫ್ ದಿ ಫ್ಯೂಚರ್ ಕಟ್ಟಡವನ್ನು ಉದ್ಘಾಟನೆ ಮಾಡಲಾಗಿದೆ. ಇದನ್ನು ಅಧಿಕೃತವಾಗಿ ದುಬೈನ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್-ಮಕ್ತೌಮ್ ತೆರೆದಿದ್ದಾರೆ. ಇದು ನಗರದ ಮುಖ್ಯ ಹೆದ್ದಾರಿಯಾದ ಶೇಖ್ ಜಾಯೆದ್ ರಸ್ತೆಯಲ್ಲಿದೆ. ಇದನ್ನು ವಿಶ್ವದ ಅತ್ಯಂತ ಸುಂದರವಾದ ಕಟ್ಟಡ ಎಂದು ಹೇಳಲಾಗುತ್ತಿದೆ. ಈ ವಸ್ತು ಸಂಗ್ರಹಾಲಯವು ಏಳಂತಸ್ತಿನ ಹಾಲೋ ಸಿಲ್ವರ್ ಎಲಿಪ್ಸ್ ಆಗಿದ್ದು, ದುಬೈ ದೊರೆಯ ಅರೇಬಿಕ್ ಕ್ಯಾಲಿಗ್ರಫಿಗಳನ್ನು ಹೊಂದಿದೆ.

ಇನ್ನು ಉದ್ಘಾಟನೆಯ ದಿನದಂದು, ಕಟ್ಟಡದ ಆಕರ್ಷಕ ಮುಂಭಾಗವು ಸಂಜೆ ವರ್ಣರಂಜಿತ ಲೇಸರ್ ಲೈಟ್ ಶೋನಿಂದ ಬೆಳಗುತ್ತಿತ್ತು. ದುಬೈ ಜನಸಮೂಹವು ಇದನ್ನು ಕಣ್ತುಂಬಿಕೊಳ್ಳಲು ಹೊರಗೆ ಜಮಾಯಿಸಿದ್ದರು. ದುಬೈ ದೊರೆ, ಅವರ ಭವಿಷ್ಯದ ದೃಷ್ಟಿಕೋನವು ವಸ್ತು ಸಂಗ್ರಹಾಲಯದ ಹಿಂದಿನ ಚಾಲನಾ ಶಕ್ತಿ ಎನ್ನಲಾಗುತ್ತಿದೆ.

ವಸ್ತುಸಂಗ್ರಹಾಲಯದ ವಿಷಯಗಳು ಇನ್ನೂ ಬಹಿರಂಗವಾಗದಿದ್ದರೂ, ಇದು ವಿನ್ಯಾಸ ಮತ್ತು ತಂತ್ರಜ್ಞಾನದ ಆವಿಷ್ಕಾರಗಳನ್ನು ಪ್ರದರ್ಶಿಸುತ್ತದೆ. ಇದು ಸಂದರ್ಶಕರನ್ನು 2071 ರ ಹೊತ್ತಿಗೆ ಅಂದರೆ ಭವಿಷ್ಯದ ಪ್ರಯಾಣಕ್ಕೆ ಕರೆದೊಯ್ಯುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

ನಿಮ್ಮ ಸಮಸ್ಯೆಗಳ ನಿವಾರಣೆಗೆ ಮಾಡಿ ಗೋ ಪೂಜೆ

ರಸ್ತೆ ಬದಿಯ ಸೈನ್‌ಬೋರ್ಡ್‌ಗಳು ವಸ್ತುಸಂಗ್ರಹಾಲಯದ ಬಗ್ಗೆ ವಿವರಿಸುತ್ತವೆ. ಇದು ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಹತ್ತಿರದಲ್ಲೇ ಇದೆ. ಇದು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅತ್ಯಾಕರ್ಷಕ ವಾಸ್ತುಶಿಲ್ಪದ ಸಂಗ್ರಹಕ್ಕೆ ಇತ್ತೀಚಿನ ಸೇರ್ಪಡೆಯಾಗಿದೆ. ಸೆಪ್ಟೆಂಬರ್ 30 ರಂದು ದುಬೈನ ಹೊರವಲಯದಲ್ಲಿ ಪ್ರಾರಂಭವಾದ ಫ್ಯೂಚರಿಸ್ಟಿಕ್ ವಿನ್ಯಾಸಗಳ ಸಂಗ್ರಹವನ್ನು ಒಳಗೊಂಡ $7-ಬಿಲಿಯನ್ ಎಕ್ಸ್‌ಪೋ ವಿಶ್ವ ಮೇಳದ ನಂತರ ಈ ಕಟ್ಟಡ ಉದ್ಘಾಟನೆ ಆಗಿದೆ.

ಯುಎಇಯ ರಾಜಧಾನಿ ಅಬುಧಾಬಿಯು ಮತ್ತೊಂದು ಹೆಗ್ಗುರುತು ವಿನ್ಯಾಸಕ್ಕೆ ನೆಲೆಯಾಗಿದೆ. ಫ್ರಾನ್ಸ್‌ನ ಲೌವ್ರೆ ವಸ್ತುಸಂಗ್ರಹಾಲಯದ ಶಾಖೆ, ಇದರ ಪರವಾನಗಿಯನ್ನು ಕಳೆದ ವರ್ಷ 2047 ಕ್ಕೆ 165 ಮಿಲಿಯನ್ ಯುರೋಗಳ ($186 ಮಿಲಿಯನ್) ವೆಚ್ಚದಲ್ಲಿ ವಿಸ್ತರಿಸಲಾಯಿತು.

ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ 2017 ರ ಕೊನೆಯಲ್ಲಿ ಲೌವ್ರೆ ಅಬುಧಾಬಿಯನ್ನು ತೆರೆದ ನಂತರ, ಕೋವಿಡ್ ಸಾಂಕ್ರಾಮಿಕದ ಮೊದಲ ಎರಡು ವರ್ಷಗಳಲ್ಲಿ ಸುಮಾರು ಎರಡು ಮಿಲಿಯನ್ ಸಂದರ್ಶಕರನ್ನು ಆಕರ್ಷಿಸಿತು. ವಿಶ್ವದ ಪ್ತಮುಖ ತೈಲ ರಫ್ತು ದೇಶವಾಗಿರುವ ಯುಎಇ, ಕಳೆದ ಕೆಲ ವರ್ಷದಿಂದ ಪ್ರವಾಸೋದ್ಯಮ ಸೇರಿದಂತೆ ಉಳಿದ ಕ್ಷೇತ್ರಗಳಿಂದಲು ಉತ್ತಮ ಬೆಳವಣಿಗೆ ಕಾಣಲು ಶ್ರಮಿಸುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...