alex Certify ಅಪ್ಪಿತಪ್ಪಿ ಈ ತಪ್ಪು ಮಾಡಿದಲ್ಲಿ ಬ್ಯಾನ್ ಆಗುತ್ತೆ ನಿಮ್ಮ ವಾಟ್ಸಾಪ್ ಖಾತೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ಪಿತಪ್ಪಿ ಈ ತಪ್ಪು ಮಾಡಿದಲ್ಲಿ ಬ್ಯಾನ್ ಆಗುತ್ತೆ ನಿಮ್ಮ ವಾಟ್ಸಾಪ್ ಖಾತೆ…!

ಪ್ರಪಂಚದಾದ್ಯಂತ ಅತೀ ಹೆಚ್ಚು ಬಳಕೆ ಮಾಡುವ ಚ್ಯಾಟಿಂಗ್​ ಅಪ್ಲಿಕೇಶನ್​ಗಳಲ್ಲಿ ವಾಟ್ಸಾಪ್​ ಕೂಡ ಒಂದಾಗಿದೆ. ಮೆಟಾ ಒಡೆತನದ ವಾಟ್ಸಾಪ್​ನ್ನು ಪ್ರತಿದಿನ ಕೋಟ್ಯಂತರ ಬಳಕೆದಾರರು ಬಳಕೆ ಮಾಡುತ್ತಾರೆ. ವಾಟ್ಸಾಪ್​ ತನ್ನ ಬಳಕೆದಾರರನ್ನು ಸುರಕ್ಷಿತವಾಗಿರಿಸಲು ಕೆಲವೊಂದು ಖಾತೆಗಳನ್ನು ನಿಯಮಿತವಾಗಿ ನಿಷೇಧಿಸುತ್ತದೆ. ಕಾರಣವನ್ನೇ ನೀಡದೇ ವಾಟ್ಸಾಪ್​ ನಿಮ್ಮ ಖಾತೆಯನ್ನೂ ಕೂಡ ನಿರ್ಬಂಧಿಸಬಹುದು.

ಹೌದು..! ನಿಮ್ಮ ವಾಟ್ಸಾಪ್​ ಖಾತೆಯು ಸೇವಾ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂಬುದು ಗಮನಕ್ಕೆ ಬಂದ ತಕ್ಷಣವೇ ನಿಮ್ಮ ಖಾತೆಯನ್ನು ನಿಷೇಧಿಸಲಾಗುತ್ತದೆ. ನೀವು ಕೂಡ ವಾಟ್ಸಾಪ್​ ಬಳಕೆದಾರರಾಗಿದ್ದರೆ ನಿಮ್ಮನ್ನು ಖಾತೆಯನ್ನು ಬ್ಯಾನ್​ ಮಾಡಲು ಕಾರಣವಾಗುವ ವಿಷಯಗಳು ಇಲ್ಲಿವೆ ನೋಡಿ:

ವೈರಸ್​ ಅಥವಾ ಮಾಲ್ವೇರ್​ಗಳನ್ನು ಕಳುಹಿಸಲು ವಾಟ್ಸಾಪ್​ ಬಳಕೆ :

ವೈರಸ್​ ಅಥವಾ ಮಾಲ್ವೇರ್​​​ಗಳನ್ನು ಹೊಂದಿರುವ ಫೈಲ್​ಗಳನ್ನು ವಾಟ್ಸಾಪ್​ ಮೂಲಕ ಶೇರ್​ ಮಾಡುವಂತಿಲ್ಲ. ಇಂತಹ ಫೈಲ್​ಗಳು ಇತರೆ ಬಳಕೆದಾರರಿಗೂ ಹಾನಿ ಉಂಟು ಮಾಡುತ್ತದೆ. ಇಂತಹ ಸಂದರ್ಭದಲ್ಲಿ ವಾಟ್ಸಾಪ್​ ನಿಮ್ಮ ಖಾತೆಯನ್ನು ಬ್ಯಾನ್​ ಮಾಡುತ್ತದೆ.

ಅಪರಿಚಿತ ಖಾತೆಗಳಿಗೆ ಮೆಸೇಜ್​ ಮಾಡುವುದು :

ಬಳಕೆದಾರರ ಅನುಮತಿಯಿಲ್ಲದೇ ಅವರ ಮೊಬೈಲ್​ ಸಂಖ್ಯೆಯನ್ನು ನೀವು ಕಂಡ ಕಂಡಲ್ಲಿ ಶೇರ್​ ಮಾಡುವಂತಿಲ್ಲ. ಅಥವಾ ಇಲ್ಲಸಲ್ಲದ ಗ್ರೂಪ್​ಗಳಿಗೆ ಬಳಕೆದಾರರ ಅನುಮತಿಯಿಲ್ಲದೇ ಆ್ಯಡ್​ ಮಾಡುವುದೂ ಕೂಡ ನಿಮ್ಮ ಖಾತೆಗೆ ಸಂಕಷ್ಟ ನೀಡಬಲ್ಲದು.

ಫೇಕ್​ ಖಾತೆಗಳನ್ನು ರಚಿಸುವುದು :

ವಾಟ್ಸಾಪ್​ನಲ್ಲಿ ನಕಲಿ ಖಾತೆಗಳನ್ನು ತೆರೆಯುವಂತಿಲ್ಲ. ವಾಟ್ಸಾಪ್​ ಬ್ಯುಸಿನೆಸ್​ನಲ್ಲಿ ಬಳಕೆದಾರರನ್ನು ವಂಚಿಸಲು ವಂಚಕರು ಸಾಮಾನ್ಯವಾಗಿ ನಕಲಿ ಖಾತೆಗಳನ್ನು ರಚಿಸುತ್ತಾರೆ.

ಬ್ರಾಡ್​ಕಾಸ್ಟ್​ ಆಯ್ಕೆಗಳ ಅತಿಯಾದ ಬಳಕೆ :

ವಾಟ್ಸಾಪ್​ನಲ್ಲಿ ಪದೇ ಪದೇ ಬ್ರಾಡ್​ಕಾಸ್ಟ್​ ಮೆಸೇಜ್​ಗಳನ್ನು ಬಳಕೆ ಮಾಡುವುದರಿಂದ ಜನರು ನಿಮ್ಮ ಮೊಬೈಲ್​ ಸಂಖ್ಯೆಯನ್ನು ರಿಪೋರ್ಟ್ ಮಾಡಬಹುದು. ಹಲವಾರು ಬಾರಿ ನಿಮ್ಮ ಮೊಬೈಲ್​ ಸಂಖ್ಯೆ ರಿಪೋರ್ಟ್ ಆದಲ್ಲಿ ನಿಮ್ಮ ಖಾತೆ ಬ್ಯಾನ್​ ಆಗಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...