ಮಾರುತಿ ಸುಜುಕಿ ಪ್ರೇಮಿಗಳಿಗೆ ಖುಷಿ ಸುದ್ದಿಯೊಂದಿದೆ. ಮಾರುತಿ ಸುಜುಕಿ ಬಲೆನೊ 2022ನ್ನು ಅತ್ಯಂತ ಕಡಿಮೆ ಬೆಲೆಗೆ ಬಿಡುಗಡೆ ಮಾಡಿದೆ. ಮಾರುತಿ ಸುಜುಕಿ ಈ ಕಾರಿನ ಬೆಲೆ ಎಕ್ಸ್ ಶೋರೂಮ್ ನಲ್ಲಿ 6.35 ಲಕ್ಷ ರೂಪಾಯಿಗಳಿಂದ ಶುರುವಾಗಲಿದೆ.
ಕಡಿಮೆ ಬೆಲೆ ಜೊತೆ ಕೆಲವು ವೈಶಿಷ್ಟ್ಯಗಳನ್ನು ನೀಡಲಾಗಿದೆ. ಈವರೆಗೆ 25,000 ಗ್ರಾಹಕರು ಈ ಕಾರನ್ನು ಬುಕ್ ಮಾಡಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದಲೂ ಬಲೆನೊ ಮೊದಲಿಗಿಂತ ಉತ್ತಮವಾಗಿದೆ. ಮಾರುತಿ ಸುಜುಕಿಯು ಈ ಕಾರಿನ ಹೊರಭಾಗ ಮತ್ತು ಒಳಭಾಗದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ.
ಹೊಸ ಬಲೆನೊ ಮೈಲೇಜ್ ಕೂಡ ಪ್ರಬಲವಾಗಿದೆ ಎಂದು ಕಂಪನಿ ಹೇಳಿದೆ. ಒಂದು ಲೀಟರ್ ಪೆಟ್ರೋಲ್ ಗೆ ಮ್ಯಾನುವಲ್ ಕಾರು 22.35 ಕಿಲೋಮೀಟರ್ ಓಡಲಿದೆ. ಇನ್ನು ಎಎಂಟಿ ರೂಪಾಂತರದ ಕಾರು ಒಂದು ಲೀಟರ್ ಪೆಟ್ರೋಲ್ ಗೆ 22.94 ಕಿಲೋಮೀಟರ್ ಮೈಲೇಜ್ ನೀಡಲಿದೆ.
360-ಡಿಗ್ರಿ ಕ್ಯಾಮೆರಾ ವೀಕ್ಷಣೆ ಇದ್ರಲ್ಲಿ ಲಭ್ಯವಿದೆ. ಹೆಚ್ಚಿನ ಸುರಕ್ಷತೆಗಾಗಿ ಕಾರಿಗೆ 6 ಏರ್‌ಬ್ಯಾಗ್‌ಗಳನ್ನು ನೀಡಲಾಗಿದೆ. ಹೊಸ ಕಾರಿನ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಕೆಲ ದಿನಗಳ ಹಿಂದಷ್ಟೆ ಬುಕ್ಕಿಂಗ್ ಶುರುವಾಗಿದ್ದು, ಈಗಾಗಲೇ 25,000 ಬುಕ್ಕಿಂಗ್ ಆಗಿದೆ ಎಂದು ಕಂಪನಿ ಹೇಳಿದೆ.