ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ತಂದೆಯೊಬ್ಬ ತಲೆತಗ್ಗಿಸುವ ಕೆಲಸ ಮಾಡಿದ್ದಾನೆ. ತಂದೆಯ ಅಮಾನವೀಯ ಕೃತ್ಯ ಕಂಡು ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಅಂಗವಿಕಲ ತಂದೆ ಮಗಳನ್ನು ಹತ್ಯೆಗೈದು ಅತ್ಯಾಚಾರವೆಸಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ದಿಲೀಪ್ ಸಿಂಗ್ ಎಂಬಾತ ವಿಕಲಾಂಗ ಎಂಬ ಕಾರಣಕ್ಕೆ ಸದಾ ಹತಾಶೆಯಿಂದ ಇರುತ್ತಿದ್ದನಂತೆ. ಆತ ತನ್ನ ಅತ್ತೆ ಮನೆಯಲ್ಲಿಯೇ ವಾಸವಾಗಿದ್ದ. 14 ವರ್ಷದ ಮಗಳ ಮೇಲೆಯೇ ಆತನ ಕೆಟ್ಟ ದೃಷ್ಟಿ ಬಿದ್ದಿತ್ತು. ಅನೇಕ ಬಾರಿ ಮಗಳ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿದ್ದಾನೆ. ಅದು ಸಾಧ್ಯವಾಗಿರಲಿಲ್ಲ. ಘಟನೆ ನಡೆದ ದಿನ ಮಗಳನ್ನು ನಂಬಿಸಿ ಕಾಡಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಬಲತ್ಕಾರಕ್ಕೆ ಯತ್ನಿಸಿದ್ದಾನೆ. ಆದ್ರೆ ಇದಕ್ಕೆ ಮಗಳು ಒಪ್ಪಲಿಲ್ಲವಂತೆ. ಕೋಪಗೊಂಡ ದಿಲೀಪ್ ಸಿಂಗ್ ಆಕೆ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ನಂತ್ರ ಶವದ ಮೇಲೆ ಅತ್ಯಾಚಾರವೆಸಗಿದ್ದಾನೆ.
ಮಗಳ ಬಗ್ಗೆ ಆಗಾಗ ಒಂದೊಂದು ಹೇಳಿಕೆ ಬದಲಿಸುತ್ತಿದ್ದ ತಂದೆ ಮೇಲೆ ಪೊಲೀಸರಿಗೆ ಅನುಮಾನ ಬಂದಿದೆ. ಸರಿಯಾಗಿ ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.