ಐಷಾರಾಮಿ ಕಾರಿನಲ್ಲಿ ಡ್ರಗ್ ದಂಧೆ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ಒಡಿಶಾ ಪೊಲೀಸ್ ತಂಡದ, ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಬಂಧಿಸಿದೆ. ಬುಧವಾರ ನಯಾಘರ್ ಜಿಲ್ಲೆಯ ಫತೇಗಢ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯ ಬಂಧನವಾಗಿದೆ.
ಇನ್ನು ಬಂಧಿತ ಡ್ರಗ್ ಪೆಡ್ಲರ್‌ನಿಂದ 12 ಲಕ್ಷ ರೂಪಾಯಿ ಮೌಲ್ಯದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಶಂಕಿತ ಮಾದಕ ದ್ರವ್ಯ ದಂಧೆಕೋರ ಗಗನ್ ಬೆಹೆರಾನನ್ನು ಬಂಧಿಸಲಾಗಿದ್ದು, ಐಷಾರಾಮಿ ಕಾರಿನಲ್ಲಿ ಸಾಗಿಸುತ್ತಿದ್ದ 116 ಕಿಲೋಗ್ರಾಂ ತೂಕದ ಗಾಂಜಾವನ್ನು ಸಹ ವಶಪಡಿಸಿಕೊಳ್ಳಲಾಗಿದೆ.
‘ಅಂತರ್ ಧರ್ಮೀಯ ವಿವಾಹದಿಂದ ತಂದೆ -ಮಗಳ ಸಂಬಂಧ ಕೊನೆಯಾಗುವುದಿಲ್ಲ’ : ಮಧ್ಯಪ್ರದೇಶ ಹೈಕೋರ್ಟ್ ಅಭಿಮತ
ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿತ ಡ್ರಗ್ ಪೆಡ್ಲರ್‌ನನ್ನು ವಿಚಾರಣೆ ನಡೆಸಲಾಗುತ್ತಿದ್ದು, ಈತನೇ ರಾಜ್ಯದ ಮಾದಕ ದ್ರವ್ಯ ದಂಧೆಯ ಕಿಂಗ್‌ಪಿನ್ ಎಂದು ಶಂಕಿಸಲಾಗಿದೆ ಎಂದು ಎಸ್‌ಟಿಎಫ್ ತಿಳಿಸಿದೆ.
2020 ರಿಂದ, ಮಾದಕ ದ್ರವ್ಯಗಳ ವಿರುದ್ಧ ವಿಶೇಷ ಅಭಿಯಾನದಲ್ಲಿ ಎಸ್‌ಟಿಎಫ್ 49 ಕೆಜಿಗಿಂತ ಹೆಚ್ಚು ಬ್ರೌನ್ ಶುಗರ್ ಮತ್ತು 90 ಕ್ವಿಂಟಾಲ್‌ಗಿಂತ ಹೆಚ್ಚು ಗಾಂಜಾವನ್ನು ವಶಪಡಿಸಿಕೊಂಡಿದೆ, ಜಿತೆಗೆ ಸುಮಾರು 125 ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದೆ