ರೈಲು ಪ್ರಯಾಣಿಕರಿಗೆ ಬೋರ್ ಎನಿಸದಿರಲು ರೈಲ್ವೆ ಇಲಾಖೆಯು ರೇಡಿಯೋ ಸೇವೆ ಒದಗಿಸಲು ಬಯಸಿದೆ. ಉತ್ತರ ರೈಲ್ವೆಯು ಶತಾಬ್ದಿ ಮತ್ತು ವಂದೇ ಭಾರತ್ ರೈಲುಗಳಲ್ಲಿ ಕಸ್ಟಮೈಸ್ ಮಾಡಿದ ಸಂಗೀತ ಮತ್ತು ಆರ್‌ಜೆ ಮೂಲಕ ಮನರಂಜನೆ ಸೇವೆಯನ್ನು ಪರಿಚಯಿಸಲು ಸಿದ್ಧತೆ ನಡೆದಿದೆ. ಈ ರೈಲುಗಳಲ್ಲಿ ಪ್ರಯಾಣಿಸುವವರು ಶೀಘ್ರದಲ್ಲೇ ತಮ್ಮ ಪ್ರಯಾಣದ ವೇಳೆ ರೇಡಿಯೋ ಮನರಂಜನೆ ಆನಂದಿಸಬಹದಾಗಿದೆ.
ದೆಹಲಿ, ಲಕ್ನೋ, ಭೋಪಾಲ್, ಚಂಡೀಗಢ, ಅಮೃತಸರ, ಅಜ್ಮೀರ್, ಡೆಹ್ರಾಡೂನ್, ಕಾನ್ಪುರ್, ವಾರಣಾಸಿ, ಕತ್ರಾಗಳಲ್ಲಿ ಪ್ರಯಾಣಿಸುವಾಗ ರೇಡಿಯೊ ಸಂಗೀತದಿಂದ ಸ್ವಾಗತಿಸಲಾಗುತ್ತದೆ.
ಒಮಿಕ್ರಾನ್ ಉಪ ರೂಪಾಂತರಿ ಕುರಿತು ನೆಮ್ಮದಿ ಸುದ್ದಿ ನೀಡಿದ ವಿಶ್ವ ಆರೋಗ್ಯ ಸಂಸ್ಥೆ
ಹತ್ತು ಶತಾಬ್ದಿ ಎಕ್ಸ್‌ಪ್ರೆಸ್ ರೈಲುಗಳು ಮತ್ತು ಎರಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ರೇಡಿಯೊ ಮೂಲಕ ಜಾಹೀರಾತು ಪ್ರಸಾರ ಮಾಡುವ ಆಲೋಚನೆ ಇದೆ.
ಮನರಂಜನೆ, ರೈಲ್ವೆ ಮಾಹಿತಿ ಮತ್ತು ವಾಣಿಜ್ಯ ಜಾಹೀರಾತಿನ ಅನುಪಾತವನ್ನು ಪ್ರಯಾಣದ ಸಮಯದಲ್ಲಿ ಗಂಟೆಗೆ ಆಧಾರದ ಮೇಲೆ 50 ನಿಮಿಷ:10 ನಿಮಿಷದಂತೆ ನೀಡಲಾಗುತ್ತದೆ.