ಕೋವಿಡ್ ಸಾಂಕ್ರಾಮಿಕ ತಗ್ಗಿದಂತೆ ಕಾಣಿಸಿದರೂ ಪೂರ್ಣ ದೂರಾಗಿಲ್ಲ. ಒಮಿಕ್ರಾನ್ ನ ಬಿಎ.2 ಉಪ ರೂಪಾಂತರಿಯು ವೇಗವಾಗಿ ಹರಡುವ ಸ್ವಭಾವವಿದೆ. ಆದರೆ, ಹೆಚ್ಚು ತೀವ್ರತರದ್ದಲ್ಲ ಎಂದು ಸಂಶೋಧಕರು ಗುರುತಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಮಂಗಳವಾರದಂದು ಒಮಿಕ್ರಾನ್ನ ಬಿಎ.2 ಉಪ- ರೂಪಾಂತರಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದೆ.
ಇದು ಬಿಎ.1 ಸ್ಟ್ರೈನ್ಗಿಂತ ಹೆಚ್ಚು ಹರಡುತ್ತದೆ. ಆದಾಗ್ಯೂ, ಇದು ಮೂಲ ತಳಿಗಿಂತ ಹೆಚ್ಚು ತೀವ್ರವಾಗಿರದ ಕಾರಣ ಎಚ್ಚರಿಕೆಗೆ ಮಹತ್ವ ಕೊಡಬೇಕಾದ ಯಾವುದೇ ಕಾರಣವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಹರ್ಷ ತಂದೆ – ತಾಯಿ ಆರೋಗ್ಯದಲ್ಲಿ ಏರುಪೇರು
ವಿಶ್ವಾದ್ಯಂತ ಹೊಸ ರೂಪಾಂತರಿಯನ್ನು ಯಾವ ರೀತಿ ಪರಿಗಣಿಸಬೇಕೆಂದು ವೈದ್ಯಲೋಕ ಹಾಗೂ ಸರ್ಕಾರಗಳಿಗೆ ವಿಶ್ವ ಆರೋಗ್ಯ ಮಾಹಿತಿ ನೀಡಿದ್ದು, ಬಿಎ.2 ಉಪ ತಳಿಯನ್ನು ರೂಪಾಂತರವೆಂದು ಪರಿಗಣಿಸುವುದನ್ನು ಮುಂದುವರಿಸಬೇಕು ಮತ್ತು ಅದನ್ನು ಒಮಿಕ್ರಾನ್ ಎಂದು ವರ್ಗೀಕರಿಸಬೇಕು ಎಂದು ಡಬ್ಲ್ಯೂ ಹೆಚ್ ಒ ಹೇಳಿಕೆಯಲ್ಲಿ ತಿಳಿಸಿದೆ.
ಹಾಗೆಯೇ ರೂಪಾಂತರದ ಮೇಲೆ ಕಟ್ಟುನಿಟ್ಟಾದ ಜಾಗರೂಕತೆ ಇರಿಸಲು ಸಾರ್ವಜನಿಕ ಆರೋಗ್ಯ ಅಧಿಕಾರಿಗಳಿಗೆ ಕರೆ ನೀಡಿದೆ.
ಕಳೆದ ವರ್ಷ ನವೆಂಬರ್ ಅಂತ್ಯದಲ್ಲಿ ಒಮಿಕ್ರಾನ್ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು. ಬಳಿಕ ವಿಶ್ವದಾದ್ಯಂತ ಹರಡಿತು. ಹೊಸ ಉಪ ರೂಪಾಂತರಿಯು ಸದ್ಯ ಡೆನ್ಮಾರ್ಕ್ನಲ್ಲಿ ಪ್ರಬಲವಾಗುತ್ತಿದೆ, ಯುಕೆನಲ್ಲಿ ಹೆಚ್ಚುತ್ತಿದೆ ಮತ್ತು ಭಾರತ ಮತ್ತು ಪಾಕಿಸ್ತಾನ ಸೇರಿದಂತೆ ಇತರೆಡೆಯೂ ಹರಡುತ್ತಿದೆ.