ರಷ್ಯಾ ಹಾಗೂ ಉಕ್ರೇನ್ ಮಧ್ಯೆ ಸಂಘರ್ಷ ತಾರಕಕ್ಕೇರಿದ್ದು, ಯುದ್ಧ ನಡೆಯೋದು ಬಹುತೇಕ ಖಚಿತವಾಗಿದೆ. ಸದ್ಯದ ಪರಿಸ್ಥಿತಿಯನ್ನು ಟಿವಿ ವರದಿಗಾರನೊಬ್ಬ 6 ಭಾಷೆಗಳಲ್ಲಿ ವಿವರಿಸಿದ್ದಾನೆ. ಆತನನ್ನು ನೆಕ್ಸ್ಟ್ ಜೇಮ್ಸ್ ಬಾಂಡ್ ಅಂತಾ ಎಲ್ಲರೂ ಹೊಗಳ್ತಿದ್ದಾರೆ.
ಅಸೋಸಿಯೇಟೆಡ್ ಪ್ರೆಸ್ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ವರದಿಗಾರನಾಗಿರುವ ಫಿಲಿಪ್ ಕ್ರೌಥರ್ ಈ ವಿಶೇಷ ಸಾಧನೆ ಮಾಡಿದ್ದಾನೆ. ರಷ್ಯಾ ಮತ್ತು ಉಕ್ರೇನ್ ನಲ್ಲಿನ ಸದ್ಯದ ಪರಿಸ್ಥಿತಿಯನ್ನು ಇಂಗ್ಲಿಷ್, ಲಕ್ಸೆಂಬರ್ಗ್, ಸ್ಪಾನಿಶ್, ಫೋರ್ಚುಗೀಸ್, ಫ್ರೆಂಚ್ ಹಾಗೂ ಜರ್ಮನ್ ಭಾಷೆಯಲ್ಲಿ ವಿವರಿಸಿದ್ದಾನೆ.
ಈ ವಿಶೇಷ ಪ್ರತಿಭೆಯನ್ನು ನೋಡಿ ಎಲ್ಲರೂ ನಿಬ್ಬೆರಗಾಗಿದ್ದಾರೆ. 59 ಸೆಕೆಂಡ್ ಗಳ ಈ ವಿಡಿಯೋ ಕೂಡ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸುಮಾರು 6 ಮಿಲಿಯನ್ ಜನರು ಇದನ್ನು ವೀಕ್ಷಿಸಿದ್ದಾರೆ. ಲೈಕ್ ಹಾಗೂ ಕಮೆಂಟ್ ಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಹರಿದು ಬಂದಿವೆ.
ಆತನ ಮಾತಿನ ಚಾಕಚಕ್ಯತೆ, ಆರು ಭಾಷೆಗಳ ಮೇಲಿನ ಹಿಡಿತ ಇವನ್ನೆಲ್ಲ ನೋಡುತ್ತಿದ್ರೆ ಫಿಲಿಪ್ ಕ್ರೌಥರ್ ಮುಂದಿನ ಜೇಮ್ಸ್ ಬಾಂಡ್ ಆಗೋದ್ರಲ್ಲಿ ಅನುಮಾನವೇ ಇಲ್ಲ ಎನ್ನುತ್ತಿದ್ದಾರೆ.