ಗಡಿ ಭದ್ರತಾ ಪಡೆ (BSF) ಬಂಪರ್ ಆಫರ್ ನೀಡಿದ್ದು, ಸಾಕಷ್ಟು ಖಾಲಿ ಹುದ್ದೆಗಳನ್ನು ಪ್ರಕಟಿಸಿ, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬಿಎಸ್ಎಫ್ ನ ಅಧಿಕೃತ ವೆಬ್ಸೈಟ್ ನಲ್ಲಿ ಬಿಡುಗಡೆ ಮಾಡಲಾದ ಅಧಿಸೂಚನೆಯ ಪ್ರಕಾರ, ಕಾನ್ಸ್ಟೇಬಲ್ (ಟ್ರೇಡ್ಸ್ಮ್ಯಾನ್) ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಆಯ್ಕೆ ಪ್ರಕ್ರಿಯೆಯು ದೈಹಿಕ ಗುಣಮಟ್ಟದ ಪರೀಕ್ಷೆ (PST), ದೈಹಿಕ ದಕ್ಷತೆ ಪರೀಕ್ಷೆ (PET), ಡಾಕ್ಯುಮೆಂಟೇಷನ್, ಟ್ರೇಡ್ ಪರೀಕ್ಷೆ, ಲಿಖಿತ ಪರೀಕ್ಷೆ ಮತ್ತು ವಿವರವಾದ ವೈದ್ಯಕೀಯ ಪರೀಕ್ಷೆ (DME) ಒಳಗೊಂಡಿರುತ್ತದೆ.
BIG NEWS: ಹಿಜಾಬ್ ವಿವಾದ; ಅರ್ಜಿ ವಿಚಾರಣೆ ಮತ್ತೆ ಮುಂದೂಡಿದ ಹೈಕೋರ್ಟ್
ಬಾರ್ಡರ್ ಸೆಕ್ಯುರಿಟಿ ಫೋರ್ಸ್ ನೇಮಕಾತಿ 2022: ಖಾಲಿ ಹುದ್ದೆಗಳ ಸಂಖ್ಯೆ
ಪುರುಷ: 2,651 ಪೋಸ್ಟ್ಗಳು
ಮಹಿಳೆ: 137 ಪೋಸ್ಟ್ಗಳು
ವಯಸ್ಸಿನ ಮಿತಿ
ಅಭ್ಯರ್ಥಿಯು ಆಗಸ್ಟ್ 1, 2021 ರಂತೆ 18 ರಿಂದ 23 ವರ್ಷಗಳ ನಡುವೆ ಇರಬೇಕು.
ಸಂಬಳದ ವಿವರಗಳು
7ನೇ CPCಪರಿಷ್ಕೃತ ವೇತನ ರಚನೆಯ ಪೇ ಮ್ಯಾಟ್ರಿಕ್ಸ್ ಲೆವೆಲ್-3, ವೇತನ ಶ್ರೇಣಿ ರೂ 21,700-69,100 ರಲ್ಲಿ ನೇಮಕಾತಿ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
ಅಭ್ಯರ್ಥಿಗಳು ಮಾರ್ಚ್ 1 (ರಾತ್ರಿ 11:59) ವರೆಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಯು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ ಆನ್ಲೈನ್ ಅರ್ಜಿಯನ್ನು ಮಾತ್ರ ಸಲ್ಲಿಸಬೇಕು ಎಂಬುದನ್ನು ಗಮನಿಸಿ. ಅರ್ಜಿ ಸಲ್ಲಿಕೆಗೆ ಬೇರೆ ಯಾವುದೇ ವಿಧಾನವನ್ನು ಸ್ವೀಕರಿಸಲಾಗುವುದಿಲ್ಲ.