ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿಯಂದು ಅವರ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಲ್ಲದೆ. ತನ್ನ ಸೊಸೈಟಿಯ ಇತರ ನಿವಾಸಿಗಳಿಗೆ ಚಾಕು ತೋರಿಸಿ ಬೆದರಿಸಿ, ಅವರ ಮನೆಯ ಧಾರ್ಮಿಕ ವಸ್ತುಗಳನ್ನು ಧ್ವಂಸಗೊಳಿಸಿರುವ ವಕೀಲ ಸೋಹೆಲ್ ಮೋರ್ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.
ಗುಜರಾತ್ ನ ರಾಜ್ಕೋಟ್ ನಗರದ ಯೂನಿವರ್ಸಿಟಿ ಪೊಲೀಸ್ ಠಾಣೆಯಲ್ಲಿ, ಮಂಜ್ಕಾದ ಶ್ಯಾಮ ಪ್ರಸಾದ್ ಮುಖರ್ಜಿ ಆವಾಸ್ ಯೋಜನೆಯಡಿಯಲ್ಲಿ ನಿರ್ಮಾಣವಾಗಿರುವ ಸೊಸೈಟಿಯ ನಗರದ ನಿವಾಸಿ ಹಾಗೂ ವಕೀಲ ಸೋಹೆಲ್ ಮೋರ್ ವಿರುದ್ಧ ಎರಡು ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ. ನಿವಾಸಿಗಳ ಮೇಲೆ ಹಲ್ಲೆ ಮಾಡಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವುದಲ್ಲದೇ, ಸ್ಥಳಕ್ಕೆ ಬಂದ ಪೊಲೀಸರ ಮೇಲೂ ಹಲ್ಲೆ ಮಾಡಿರುವುದರಿಂದ ಆತನ ವಿರುದ್ಧ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಹಾಗೂ ಹಲ್ಲೆ ಪ್ರಕರಣ ದಾಖಲಾಗಿದೆ.
ಇನ್ನು ಘಟನೆಯ ಸಂಪೂರ್ಣ ವಿವರ ನೋಡುವುದಾದರೆ, ಶಿವಾಜಿ ಜಯಂತಿಯಂದು ಮೂಲತಃ ಮುಸ್ಲಿಂ ಆಗಿರುವ ಸೋಹೆಲ್ ಮೋರ್, ಸೊಸೈಟಿಯ ವಾಟ್ಸಾಪ್ ಗ್ರೂಪ್ ನಲ್ಲಿ ಶಿವಾಜಿ ಅವರ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿ ಕೆಟ್ಟ ಮೀಮ್ ಹಂಚಿಕೊಂಡಿದ್ದಾನೆ. ಇದರಿಂದ ಕೋಪಗೊಂಡ ಅದೇ ಸೊಸೈಟಿಯಲ್ಲಿರುವ ಜ್ಯೋತಿಸುಧಾ ಅವರು ಸೋಹೆಲ್ ಸಂಖ್ಯೆಗೆ ಕರೆ ಮಾಡಿ ಸಂದೇಶ ಡಿಲೀಟ್ ಮಾಡಿ ಕ್ಷಮೆಯಾಚಿಸಿ ಎಂದಿದ್ದಾರೆ.
ಆದರೆ ಮೋರ್, ಇಂತಾ ಕಾಮೆಂಟ್ ಗಳು, ಪೋಸ್ಟ್ ಗಳು ಬರುತ್ತಲೆ ಇರುತ್ತವೆ. ಈಗ ಭಾರತ ಪಾಕಿಸ್ತಾನವಾಗಿ ಹಿಂದೂಗಳೆಲ್ಲ ಇಲ್ಲಿಂದ ಹೊರಟೋಗಿ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಪದೇ ಪದೇ ಇದೇ ಮಾತುಗಳನ್ನಾಡಿದ್ದಾರೆ.
ಇದರಿಂದ ಬೇಸರಗೊಂಡ ಜ್ಯೋತಿಸುಧಾ ಅವರು ಮೋರ್ ಬಳಿ ಹೋಗಿ ಈ ರೀತಿಯಾಗಿ ನಡೆದುಕೊಳ್ಳಬೇಡಿ ಎಂದಿದ್ದಾರೆ. ಈ ಸಂದರ್ಭದಲ್ಲಿ ಆತ ಆಕೆಗೆ ಚಾಕು ತೋರಿಸಿ ಸಾಯಿಸುವುದಾಗಿ ಹೆದರಿಸಿದ್ದಾನೆ. ಅಷ್ಟೇ ಅಲ್ಲಾ ಅವರ ಫ್ಲಾಟ್ ನಲ್ಲಿರುವ ಗಣೇಶನ ಮೂರ್ತಿ ಹಾಗೂ ಮನೆಯ ಮುಂದಿನ ತೋರಣವನ್ನು ಧ್ವಂಸಗೊಳಿಸಿದ್ದಾನೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮೊದಲು ಎಲ್ಲರೊಂದಿಗೆ ಬೆರೆಯುತ್ತಿದ್ದ ಮೋರ್, ಕರ್ನಾಟಕದ ಹಿಜಾಬ್ ವಿವಾದದ ನಂತರ ಮೂಲಭೂತವಾದಿಯಂತಾಡಲು ಶುರು ಮಾಡಿಕೊಂಡಿದ್ದ. ಆತನ ವಾಟ್ಸಾಪ್ ಡಿಪಿಯಲ್ಲಿ ಐ ಸಪೋರ್ಟ್ ಹಿಜಾಬ್ ಎಂಬ ಚಿತ್ರವಿದೆ. ಕೆಲ ದಿನಗಳಿಂದ ಆತ ಹಿಂದೂಗಳನ್ನ ನೋಡಿದರೆ ವಿಚಿತ್ರವಾಗಿ ವರ್ತಿಸುತ್ತಿದ್ದಾನೆ ಎಂದು ಸೊಸೈಟಿಯ ನಿವಾಸಿಗಳು ತಿಳಿಸಿದ್ದಾರೆ. ಇನ್ನು ವಾತಾವರಣ ತಿಳಿಗೊಳಿಸಲು ಬಂದ ಪೊಲೀಸ್ ಪೇದೆ ರಾವತ್ ಮೇಲೂ ಮೋರ್ ಹಲ್ಲೆ ಮಾಡಿದ್ದಾನೆ ಎಂದು ವರದಿಯಾಗಿದೆ.