
ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬ ಅಸ್ಸಾಂನ ಗುವಾಹಟಿಗೆ ಪ್ರಯಾಣಿಸಿ, ಅಲ್ಲಿ ತನ್ನ ಗೆಳತಿಯ ಸೋದರ ಸಂಬಂಧಿಗೆ ಗುಂಡು ಹಾರಿಸಿರುವ ಆಘಾತಕಾರಿ ಘಟನೆ ಭಾನುವಾರ ನಡೆದಿದೆ.
ಈ ಸಂಬಂಧ ಪೊಲೀಸರು ಸಮರ್ ರಾಯ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ತನ್ನ ಗೆಳತಿಯ ಸಹೋದರನಿಗೆ ಗುಂಡು ಹಾರಿಸಿದ ನಂತರ ಸಮರ್ ಪೊಲೀಸರಿಂದ ಬಚಾವಾಗಲೂ, ಆತ ಯಾರಿಗೆ ಗುಂಡು ಹಾರಿಸಿದ್ದನೊ ಅವರ ಮನೆಯಲ್ಲಿಯೇ ಆಶ್ರಯ ಪಡೆದಿದ್ದನು ಎಂದು ಸ್ಥಳೀಯ ಮಾಧ್ಯಮಗಳ ವರದಿಯಲ್ಲಿ ತಿಳಿದುಬಂದಿದೆ.
ಆರೋಪಿಯು ಅದಾಗಲೇ ತಾನು ಶೂಟ್ ಮಾಡಿದವನ ನಿವಾಸದಲ್ಲೆ ಆಶ್ರಯ ಪಡೆದಿದ್ದನು. ಈ ಪ್ರಕರಣದಲ್ಲಿ ಪೊಲೀಸ್ ತಂಡವು ಅತ್ಯಂತ ಜಾಗರೂಕರಾಗಿ ಕಾರ್ಯ ನಿರ್ವಹಿಸಿದೆ. ಕನಿಷ್ಠ ಒಂದು ಗಂಟೆಯ ಪ್ರಯತ್ನದ ನಂತರ ಆರೋಪಿಯನ್ನು ನಿರಾಯುಧಗೊಳಿಸಿ, ಅವನಿಗೂ ಹಾಗೂ ಪೊಲೀಸರಿಗೂ ಯಾವುದೇ ಹಾನಿಯಾಗದಂತೆ ನೋಡಿಕೊಂಡಿದೆ. ಆನಂತರ ಅವನನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಸುಬ್ರಜ್ಯೋತಿ ಬೋರ ಮಾಹಿತಿ ನೀಡಿದ್ದಾರೆ.
ಬಜರಂಗದಳ ಕಾರ್ಯಕರ್ತನ ಹತ್ಯೆ ಖಂಡಿಸಿ ಫೆ. 23 ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ
ಘಟನೆಗೆ ಯುವತಿ ಈತನ ಪ್ರೀತಿಯನ್ನು ನಿರಾಕರಿಸಿರುವುದೇ ಕಾರಣ ಎಂದು ಅನುಮಾನಿಸಲಾಗಿದೆ. ಬಂಧಿತ ಆರೋಪಿ ಮತ್ತು ಯುವತಿ ಇಬ್ಬರೂ, ಈ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ಭೇಟಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈತ ಹುಡುಗಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂದು ವರದಿಯಾಗಿದ್ದು, ಪೊಲೀಸರು ಆ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ.
ಇನ್ನು ಸಮರ್ ರಾಯ್ ಒಡೆದ ಗುಂಡು ಪ್ರೇಮ್ ಕುಮಾರ್ ದೇಬನಾಥ್ ಎನ್ನುವವರ ದೇಹ ಹೊಕ್ಕಿತ್ತು. ಈಗಾಗ್ಲೇ ಅವರ ದೇಹದಿಂದ ಗುಂಡು ತೆಗೆಯಲಾಗಿದ್ದರೂ, ಅವರ ಚಿಕಿತ್ಸೆ ಮುಂದುವರೆದಿದೆ. ಅವರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆಂದು ಪೊಲೀಸರಿಂದ ತಿಳಿದು ಬಂದಿದೆ.