ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷದ ಕಾರ್ಯಕರ್ತರು ಶನಿವಾರ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವೇಳೆಯಲ್ಲಿ ಸ್ಕೂಟರ್ನಲ್ಲಿ ಪ್ರತಿಭಟನಾ ಸ್ಥಳದಿಂದ ಸಾಗಲು ಯತ್ನಿಸಿದ ಇಬ್ಬರು ಮಹಿಳೆಯರಿಗೆ ಕಿರುಕುಳ ನೀಡಿದ ಘಟನೆಯು ವರದಿಯಾಗಿದೆ.
ಕ್ಯಾಮರಾ ಕಣ್ಣಲ್ಲಿ ಸೆರೆಯಾದ ದೃಶ್ಯಗಳಲ್ಲಿ ಡಿಎಂಕೆ ಕಾರ್ಯಕರ್ತರು ಮಹಿಳೆಯರನ್ನು ಸುತ್ತುವರಿದಿದ್ದಾರೆ ಹಾಗೂ ಕೆಲವು ಕಾರ್ಯಕರ್ತರು ಮಹಿಳೆಯರ ಸ್ಕೂಟರ್ಗೆ ಒದ್ದು ಹಾನಿ ಮಾಡುತ್ತಿರೋದನ್ನೂ ಕಾಣಬಹುದಾಗಿದೆ.
ರಸ್ತೆಯಲ್ಲಿ ಕುಳಿತು ಈ ರೀತಿ ಗಲಾಟೆ ಮಾಡುವಂತೆ ನಾವು ನಿಮಗೆ ಹೇಳಿದ್ದೇವೆಯೇ..? ನೀವು ಪುರುಷರ ಗುಂಪು ಸುತ್ತುವರಿದಿದ್ದೀರಿ ಎಂದ ಮಾತ್ರಕ್ಕೆ ನಿಮಗೆ ನಮ್ಮನ್ನು ಹೆದರಿಸಬಹುದು ಎಂದು ಭಾವಿಸಿದ್ದೀರಾ ಎಂದು ಮಹಿಳೆಯೊಬ್ಬರು ಪ್ರಶ್ನೆ ಮಾಡುವುದನ್ನು ಕಾಣಬಹುದಾಗಿದೆ.
ತಿರುವನ್ಮಿಯೂರಿನಲ್ಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ವೇಳೆ ಡಿಎಂಕೆ ಕಾರ್ಯಕರ್ತರು ಬೂತ್ಗಳನ್ನು ವಶಪಡಿಸಿಕೊಂಡರು ಎಂಬ ಆರೋಪ ಎದುರಾದ ಬಳಿಕ ಆಕ್ರೋಶಗೊಂಡ ಡಿಎಂಕೆ ಕಾರ್ಯಕರ್ತರು ಈ ಪ್ರತಿಭಟನೆಯನ್ನು ನಡೆಸಿದ್ದಾರೆ.
ಈ ಘರ್ಷಣೆಯು ಡಿಎಂಕೆ ಕಾರ್ಯಕರ್ತರು ಪುದುಚೇರಿ ಮೂಲಕ ಚೆನ್ನೈ ಮತ್ತು ಕನ್ಯಾಕುಮಾರಿಯನ್ನು ಸಂಪರ್ಕಿಸುವ ರಾಜ್ಯದ ಪೂರ್ವ ಕರಾವಳಿ ರಸ್ತೆಯಲ್ಲಿ ರೋಡ್ ರೋಕೋ ಪ್ರತಿಭಟನೆಗೆ ಕರೆ ನೀಡುವಂತೆ ಪ್ರೇರೇಪಿಸಿತು.