ಮದುವೆ ಎಂದರೆ ಸಾಕು ಭಾರತದಲ್ಲಿಅದು ಭಾರಿ ಖರ್ಚುವೆಚ್ಚ, ಆಡಂಬರದ ಸಮಾರಂಭ. ಹೆಣ್ಣಿನ ಕಡೆಯವರು ಸ್ವಲ್ಪ ಸ್ಥಿತಿವಂತರಾಗಿದ್ದರೆ ಸಾಕು ವಿವಾಹವು ದೊಡ್ಡ ಉತ್ಸವ ಎನಿಸಲಿದೆ. ಅದೇ ರೀತಿ ಮದುವೆ ಗಂಡಿನ ಕಡೆಯವರು ಶ್ರೀಮಂತರಾಗಿದ್ದರೆ, ಅವರು ಕೂಡ ನೂತನ ವಧು-ವರರಿಗೆ ದುಬಾರಿ ಉಡುಗೊರೆಗಳನ್ನು ನೀಡಿ ನೆಂಟರು, ಪರಿಚಿತರು ಬಾಯಿಯ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಲು ಹಿಂಜರಿಯಲ್ಲ.
ಅಂತಹದ್ದೇ ಒಂದು ಭರ್ಜರಿ ಆಡಂಬರ ಪ್ರದರ್ಶನದ ಮದುವೆಯು ರಾಜಸ್ಥಾನದಲ್ಲಿ ನಡೆದಿದೆ. ಗಂಡಿನ ಮನೆಯವರು ಸೊಸೆಯನ್ನು ಹೆಲಿಕಾಪ್ಟರ್ನಲ್ಲಿ ಕರೆದುಕೊಂಡು ಹೋಗಿದ್ದಾರೆ.
ಕರೌಲಿ ಜಿಲ್ಲೆಯ ಕಾಮ್ರಿ ಗ್ರಾಮದಲ್ಲಿ ನಡೆದ ಮದುವೆಗೆ 6.5 ಲಕ್ಷ ರೂ. ಬಾಡಿಗೆಯ ಹೆಲಿಕಾಪ್ಟರ್ ಬಂದು ನಿಂತಿದೆ. ಅದರಲ್ಲಿ ವರನ ಕುಟುಂಬಸ್ಥರು ನೂತನ ದಂಪತಿಗಳ ಸಮೇತ ಭಾರತ್ಪುರಕ್ಕೆ ಬಂದಿಳಿದು ಗ್ರಾಮಸ್ಥರನ್ನು ಅಚ್ಚರಿಗೊಳಿಸಿದ್ದಾರೆ.
ಇದಕ್ಕೆಲ್ಲ ಕಾರಣ ರಸ್ತೆಹೋಕನೊಬ್ಬ ವರ ವಿಜೇಂದರ್ ಸೈನಿ ತಂದೆಗೆ ಮಾಡಿದ ಲೇವಡಿ…! ಹೌದು, ರಾಧೇಶ್ಯಾಮ್ ಸಣ್ಣವರಿದ್ದಾಗ ರಸ್ತೆಯಲ್ಲಿ ಹೆಲಿಕಾಪ್ಟರ್ ಆಟಿಕೆ ಹಿಡಿದು ಆಟವಾಡುತ್ತಿದ್ದಾಗ ರಸ್ತೆಹೋಕನೊಬ್ಬ ಲೇವಡಿ ಮಾಡಿದ್ದ. ನಿನ್ನ ಮಗನ ಮದುವೆಗೆ ನಿಜವಾದ ಹೆಲಿಕಾಪ್ಟರ್ ತರಿಸಿಕೋ ಎಂದಿದ್ದ.
ಅದನ್ನೇ ವಿಜೇಂದರ್ ತಂದೆಯಾದ ರಾಧೇಶ್ಯಾಮ್ ಸವಾಲಾಗಿ ಸ್ವೀಕರಿಸಿ ಮಗನ ಮದುವೆಗೆ ನಿಜವಾದ ಹೆಲಿಕಾಪ್ಟರ್ ತರಿಸಿ ಗ್ರಾಮಸ್ಥರ ನಾಲಿಗೆಗೆ ಬೀಗಹಾಕಿದ್ದಾರೆ. ಮತ್ತೊಂದು ವಿಶೇಷವೆಂದರೆ, ಮಗನಿಗೆ ಬಡವರ ಮನೆಯ ಹೆಣ್ಣುಮಗಳೇ ಬೇಕು ಎಂದು ಹುಡುಕಿಕೊಂಡು ಹೋಗಿ ಖುಷ್ಬೂ ಎಂಬ ಯುವತಿಯೊಂದಿಗೆ ವಿವಾಹ ನೆರವೇರಿಸಿದ್ದಾರೆ.
https://youtu.be/Mz0ALmd-gOs