alex Certify ಬೆಟ್ಟವೇರಿ ಸಾಹಸ ಮೆರೆದ 62 ರ ವೃದ್ಧೆ, ಜೀವನೋತ್ಸಾಹಕ್ಕೆ ಬೆರಗಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಟ್ಟವೇರಿ ಸಾಹಸ ಮೆರೆದ 62 ರ ವೃದ್ಧೆ, ಜೀವನೋತ್ಸಾಹಕ್ಕೆ ಬೆರಗಾದ ನೆಟ್ಟಿಗರು

ವಯಸ್ಸಾದಂತೆ ವಯೋಸಹಜ ಕಾರಣಕ್ಕೆ ಬಹುತೇಕರು ಮೂಲೆ ಸೇರುವುದು ಖಾಯಂ. ಅಂತಹವರ ನಡುವೆ ಅಲ್ಲೊಬ್ಬ ಇಲ್ಲೊಬ್ಬರು ಸಾಹಸಿ ಪ್ರವೃತ್ತಿ ಕಾರಣದಿಂದ ಗಮನ ಸೆಳೆಯುವುದುಂಟು

ಸಾಹಸ ಚಟುವಟಿಕೆಗಳಲ್ಲಿ ಭಾಗವಹಿಸುವ ಅನೇಕ ಹಿರಿಯ ನಾಗರಿಕರು ತಮಗೆ ‘ವಯಸ್ಸು ಆಗಿಲ್ಲ’ ಎಂದು ಜೀವನೋತ್ಸಾಹ ತೋರ್ಪಡಿಸುವುದುಂಟು.

ಕೆಲವು ದಿನಗಳ ಹಿಂದೆ ಕೇರಳದ 72 ವರ್ಷದ ಮಹಿಳೆಯೊಬ್ಬರು ಪಾಲಕ್ಕಾಡ್‌ನಲ್ಲಿ ನಿರ್ಭಯವಾಗಿ ಜಿಪ್‌ಲೈನ್ ಮಾಡಿದ್ದರು. ಈಗ, ಬೆಂಗಳೂರಿನ 62 ವರ್ಷದ ಮಹಿಳೆಯೊಬ್ಬರು ಪಶ್ಚಿಮ ಘಟ್ಟಗಳಲ್ಲಿನ ಶಿಖರಗಳಲ್ಲಿ ಒಂದಾದ 1,868-ಮೀಟರ್ (6,129 ಅಡಿ)-ಅಗಸ್ತ್ಯರ್ಕೂಡಮ್ ಅನ್ನು ಏರಿ ಸುದ್ದಿಯಾಗಿದ್ದಾರೆ.

ಹೆಚ್ಚುತ್ತಿದೆ ಇಪಿಎಫ್‌ಒ ಚಂದಾದಾರಿಕೆ: ಡಿ. 2021 ರಲ್ಲಿ 14.6 ಲಕ್ಷ ಚಂದಾದಾರರು ಸೇರ್ಪಡೆ

ನಾಗರತ್ನಮ್ಮ ಫೆಬ್ರವರಿ 16ರಂದು ಇತರ ಚಾರಣಿಗರ ಸಹಾಯದಿಂದ ಅಗಸ್ತ್ಯರ್ಕೂಡಮ್ ಏರಿದರು. 62 ವರ್ಷದ ಅವರು ಬೆಂಗಳೂರಿನಿಂದ ತಮ್ಮ ಮಗ ಮತ್ತು ಸ್ನೇಹಿತರೊಂದಿಗೆ ಕೇರಳಕ್ಕೆ ಬಂದಿದ್ದರು.

ನಾಗರತ್ನಮ್ಮ ಕಳೆದ 40 ವರ್ಷಗಳಿಂದ ತಮ್ಮ ಕುಟುಂಬದ ಜವಾಬ್ದಾರಿಗಳಲ್ಲಿ ನಿರತರಾಗಿದ್ದರು ಮತ್ತು ಇತರ ಚಟುವಟಿಕೆಗಳಿಗೆ ಸಮಯ ಮೀಸಲಿಡಲು ಸಾಧ್ಯವಾಗಿರಲಿಲ್ಲವಂತೆ. ಈ ಮಕ್ಕಳೆಲ್ಲರೂ ತಮ್ಮ‌ ಕಾಲಮೇಲೆ ನೆಲೆ ನಿಂತಿದ್ದಾರೆ. ಹೀಗಾಗಿ ಈಕೆ ಧೈರ್ಯದಿಂದ ತಮಗಾಗಿ ಸಮಯ ಮೀಸಲಿಟ್ಟು ಪರ್ವತ ಚಾರಣವನ್ನು ಪ್ರಯತ್ನಿಸಲು ನಿರ್ಧರಿಸಿದರು.

ವಿಶೇಷವೆಂದರೆ ಸುರಕ್ಷತಾ ಕಾರಣ ಮತ್ತು ಸ್ಥಳೀಯ ಬುಡಕಟ್ಟು ಜನರ ವಿರೋಧದ ಕಾರಣದಿಂದ 14 ವರ್ಷದೊಳಗಿನ‌ ಮಹಿಳೆಯರಿಗೆ ಇದನ್ನು ಏರಲು ಅವಕಾಶ ಇರಲಿಲ್ಲ. ಇತ್ತೀಚೆಗೆ ನಿಯಮ ಬದಲಿಸಲಾಗಿತ್ತು.

ಇದೀಗ ಅವರ ಟ್ರೆಕ್ಕಿಂಗ್ ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಫಿಟ್ನೆಸ್ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ವಯಸ್ಸಿನಲ್ಲಿ ಕೂಡ ಉತ್ಸಾಹದಿಂದ ಬೆಟ್ಟವೇರಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...