ಸೂಪರ್ಸ್ಟಾರ್ ರಜನಿಕಾಂತ್ ಅವರು ವರ್ಷಕ್ಕೆ ಎರಡು ಸಿನಿಮಾ ಮಾಡಲೇಬೇಕು ಎನ್ನುವುದು ಅವರ ಅಭಿಮಾನಿಗಳ ಬೇಡಿಕೆ. ಅದು ಕೇವಲ ತಮಿಳುನಾಡಿಗೆ ಮಾತ್ರವೇ ಸೀಮಿತವಲ್ಲ. ಮಲೇಷ್ಯಾ, ಸಿಂಗಾಪುರ್, ಇಂಡೋನೇಷ್ಯಾ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಇರುವ ರಜನಿ ಫ್ಯಾನ್ಸ್ಗೆ ಸ್ಟೈಲ್ಸ್ ಹಾಗೂ ಸ್ಟಂಟ್ಗಳ ಭರ್ಜರಿ ಬಾಡೂಟ ಎನಿಸುವ ರಜಿನಿಕಾಂತ್ ಸಿನಿಮಾ ನೋಡಲೇಬೇಕು ಎಂಬ ಮಹದಾಸೆ.
ಅದರಂತೆ ನಟ ರಜನಿಕಾಂತ್ ಕೂಡ ಫ್ಯಾನ್ಸ್ಗೆ ನಿರಾಸೆ ಮಾಡಲ್ಲ. 71 ವರ್ಷದ ರಜನಿ ಅವರಿಗೆ ಸ್ವಲ್ಪ ಆರೋಗ್ಯ ಸಮಸ್ಯೆ ಇತ್ತೀಚೆಗೆ ಕಾಣಿಸಿಕೊಂಡಿತ್ತು. ಅದರಿಂದ ಚೇತರಿಸಿಕೊಂಡಿರುವ ಅವರು ಅವರ 170ನೇ ಸಿನಿಮಾದ ತಯಾರಿಯಲ್ಲಿ ಇದ್ದಾರೆ ಎನ್ನಲಾಗಿದೆ. ಅದಕ್ಕೂ ಮುನ್ನ 169 ನೇ ಸಿನಿಮಾಗೆ ಈಗಾಗಲೇ ಖ್ಯಾತ ನಿರ್ದೇಶಕ ನೆಲ್ಸನ್ ಸಾರಥ್ಯ ವಹಿಸುತ್ತಿರುವುದು ಖಾತ್ರಿಯಾಗಿದೆ.
BIG NEWS: ಕ್ರಿಮಿನಲ್ ಪ್ರಕರಣಗಳ ವಿಚಾರಣೆ ರದ್ದು ಕುರಿತಂತೆ ‘ಸುಪ್ರೀಂ’ ಮಹತ್ವದ ಅಭಿಪ್ರಾಯ
170ನೇ ಸಿನಿಮಾವನ್ನು ದಿವಂಗತ ನಟಿ ಶ್ರೀದೇವಿ ಅವರ ಗಂಡ ಹಾಗೂ ಬಹುಭಾಷೆಗಳಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಬೋನಿ ಕಪೂರ್ ನಿರ್ಮಾಣ ಮಾಡಲಿದ್ದಾರೆ ಎಂಬ ವದಂತಿಗಳು ಹಬ್ಬಿವೆ. ಇದಕ್ಕೆ ಟ್ವಟಿರ್ನಲ್ಲಿ ಅವರೇ ಸ್ಪಷ್ಟನೆ ನೀಡಿ, ಅಂಥ ವದಂತಿಗಳನ್ನು ಹರಿಬಿಡುವ ಕೀಳುಮಟ್ಟದ ಪ್ರಚಾರತಂತ್ರ ನನ್ನದಲ್ಲ. ರಜನಿಕಾಂತ್ ಮತ್ತು ನಾನು ಬಹುವರ್ಷಗಳ ಗೆಳೆಯರು. ಅವರ ಸಿನಿಮಾ ನಿರ್ಮಾಣದ ಖುಷಿಯನ್ನು ಖುಲ್ಲಂಖುಲ್ಲ ಹಂಚಿಕೊಳ್ಳುತ್ತೇನೆ ಎಂದಿದ್ದಾರೆ.
ಬಹುಶಃ ಈ ಚಿತ್ರಕ್ಕೆ ಅರುಣರಾಜ್ ಅವರು ನಿರ್ದೇಶನ ಮಾಡುವ ನಿರೀಕ್ಷೆಯಿದೆ. ಸದ್ಯಕ್ಕೆ ಬೋನಿ ಕಪೂರ್ ಅವರು ಖ್ಯಾತ ತಮಿಳು ನಟ ಅಜಿತ್ ಕುಮಾರ್ ನಟಿಸಿರುವ ’’ ವಲಿಮೈ ’’ ಸಿನಿಮಾ ಬಿಡುಗಡೆಯಲ್ಲಿ ಬ್ಯುಸಿಯಾಗಿದ್ದಾರೆ. ಫೆ.24ರಂದು ಈ ಸಿನಿಮಾಗೆ ತೆರೆಗೆ ಅಪ್ಪಳಿಸಲಿದೆ.