ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿದ ಆರೋಪಕ್ಕೆ ಪೇದೆಯೊಬ್ಬನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ನಂತರ ಆತ ಜಾಮೀನು ಪಡೆದು ಬಂಧಮುಕ್ತವಾಗಿದ್ದಾನೆ ಎಂದು ತಿಳಿದು ಬಂದಿದೆ.
ಮುಂಬೈನ ದಾದರ್ ಪ್ರದೇಶದಲ್ಲಿ, ಫೆಬ್ರವರಿ 14ರಂದು ಹಲ್ಲೆ ನಡೆದಿದೆ. ತನ್ನ ಸೋದರ ಸಂಬಂಧಿಯೇ ತನ್ನ ತಾಯಿಯನ್ನು ಹಿಂಸಿಸುತ್ತಿದ್ದಾರೆಂದು ಆರೋಪಿಸಿ 37 ವರ್ಷದ ವ್ಯಕ್ತಿಯೊಬ್ಬರು ಅವರೊಂದಿಗೆ ಮಾತನಾಡಲು ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಪೊಲೀಸ್ ಪೇದೆ, ಹಲ್ಲೆಗೊಳಗಾದ ವ್ಯಕ್ತಿಯ ಸೋದರ ಸಂಬಂಧಿಯ ಸ್ನೇಹಿತ ಎಂದು ಪೊಲೀಸರ ಮೂಲಗಳಿಂದ ತಿಳಿದು ಬಂದಿದೆ. ಅವರಿಬ್ಬರ ನಡುವಿನ ಮಾತಿನ ಚಕಮಕಿಯಲ್ಲಿ ಮಧ್ಯ ಬಂದ ಪೇದೆ, ವ್ಯಕ್ತಿಯ ಕಣ್ಣಿಗೆ ಜೋರಾಗಿ ಗುದ್ದಿದ್ದಾನೆ. ಆತನ ಪಂಚ್ ಎಷ್ಟು ತೀವ್ರವಾಗಿತ್ತು ಎಂದರೆ, ಸಂತ್ರಸ್ತನ ಕಣ್ಣಿಗೆ ಹದಿನೈದು ಹೊಲಿಗೆಗಳನ್ನು ಹಾಕಲಾಗಿದೆ. ಜೊತೆಗೆ ಆತನ ಕಣ್ಣು ಉಳಿಯಬೇಕೆಂದರೆ, ಆತ ಇನ್ನಷ್ಟು ಸರ್ಜರಿಗಳನ್ನ ಮಾಡಿಸಿಕೊಳ್ಳಬೇಕಿದೆ ಎಂದು ವರದಿಯಾಗಿದೆ.
ರಾಗಿ ಖರೀದಿ ನಿರ್ಬಂಧ ತೆಗೆದುಹಾಕಲು ಸಿದ್ದರಾಮಯ್ಯ ಪತ್ರ
ಇನ್ನು, ಈ ಸಂಬಂಧ ಮುಂಬೈ ನಗರದ ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಹಲ್ಲೆಗೊಳಗಾದ ವ್ಯಕ್ತಿ ರೋಹನ್ ಠಾಕೂರ್ ಹಾಗೂ ಪೊಲೀಸ್ ಕಾನ್ಸ್‌ಟೇಬಲ್ ಸುಜಿತ್ ಗಾಯಾಕ್ವಾಡ್ ವಿರುದ್ಧ ಪ್ರಕರಣ ದಾಖಲಾಗಿದೆ.