ನವದೆಹಲಿ: ಇಂಡಿಗೋದ ಸಹ ಪ್ರವರ್ತಕ ರಾಕೇಶ್ ಗಂಗ್ವಾಲ್ ಅವರು ಮಾತೃ ಸಂಸ್ಥೆ ಇಂಟರ್ ಗ್ಲೋಬ್ ಏವಿಯೇಷನ್ ನ ನಿರ್ದೇಶಕರ ಮಂಡಳಿಗೆ ಶುಕ್ರವಾರ ರಾಜೀನಾಮೆ ನೀಡಿದ್ದು, ಮುಂದಿನ ಐದು ವರ್ಷಗಳಲ್ಲಿ ವಿಮಾನಯಾನದಲ್ಲಿ ಈಕ್ವಿಟಿ ಪಾಲನ್ನು ಕ್ರಮೇಣ ಕಡಿಮೆಗೊಳಿಸುವುದಾಗಿ ಹೇಳಿದ್ದಾರೆ.
ಗಂಗ್ವಾಲ್ ಮತ್ತು ಅವರ ಸಂಬಂಧಿತ ಸಂಸ್ಥೆಗಳು ಈ ಕಂಪನಿಯಲ್ಲಿ ಸುಮಾರು ಶೇ. 37 ರಷ್ಟು ಪಾಲು ಹೊಂದಿವೆ. ಇಂಟರ್ ಗ್ಲೋಬ್ ಏವಿಯೇಷನ್‌ನಲ್ಲಿ ರಾಹುಲ್ ಭಾಟಿಯಾ ಮತ್ತು ಅವರ ಸಂಬಂಧಿತ ಘಟಕಗಳು ಸುಮಾರು 38 ಪ್ರತಿಶತ ಪಾಲು ಹೊಂದಿವೆ.
ನಾನು 15 ವರ್ಷಗಳಿಗೂ ಹೆಚ್ಚು ಕಾಲ ಕಂಪನಿಯಲ್ಲಿ ದೀರ್ಘಾವಧಿಯ ಷೇರುದಾರನಾಗಿದ್ದೇನೆ. ಒಂದು ದಿನ ಈ ಬಗ್ಗೆ ಯೋಚಿಸುವುದು ಸಹಜ ಎಂದು ಗಂಗ್ವಾಲ್ ರಾಜೀನಾಮೆ ಬಗ್ಗೆ ಮಂಡಳಿಯ ಸದಸ್ಯರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಕಂಪನಿಯಲ್ಲಿ ನನ್ನ ಈಕ್ವಿಟಿ ಪಾಲನ್ನು ನಿಧಾನವಾಗಿ ಕಡಿಮೆ ಮಾಡುವುದು ನನ್ನ ಪ್ರಸ್ತುತ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.