ರಾಜಸ್ಥಾನದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮಗನ ಮೋಸಕ್ಕೆ ನ್ಯಾಯ ಕೇಳಲು ಬಂದ ಅಪ್ರಾಪ್ತೆ ಮೇಲೆ ತಂದೆ ಕೂಡ ಅತ್ಯಾಚಾರವೆಸಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಂದೆ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆ ಮೇಲೆ ಯುವಕನೊಬ್ಬ ಅತ್ಯಾಚಾರವೆಸಗಿದ್ದಾನೆ. ಆಕೆ ಗರ್ಭಿಣಿ ಎಂಬ ಸಂಗತಿ ತಿಳಿಯುತ್ತಿದ್ದಂತೆ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇದ್ರಿಂದ ನೊಂದ ಅಪ್ರಾಪ್ತೆ, ಯುವಕನ ತಂದೆ ಬಳಿ ನ್ಯಾಯ ಕೇಳಲು ಬಂದಿದ್ದಾಳೆ. ಮಗನ ಜೊತೆ ಅಪ್ರಾಪ್ತೆ ಮದುವೆ ಮಾಡಿಸುವ ಬದಲು, ಮದುವೆ ಮಾಡಿಸುತ್ತೇನೆಂದು ನಂಬಿಸಿ ಆಕೆಯ ಮೇಲೆ ತಂದೆಯೂ ಅತ್ಯಾಚಾರವೆಸಗಿದ್ದಾನೆ. ಅಷ್ಟೇ ಅಲ್ಲ ತನ್ನ ಸ್ನೇಹಿತನಿಗೆ ಅಪ್ರಾಪ್ತೆಯನ್ನು ಒಪ್ಪಿಸಿದ್ದಾನೆ.
2019ರಲ್ಲಿ ಆರೋಪಿ ರೋನಿ ಜೊತೆ ಅಪ್ರಾಪ್ತೆ ವಾಸವಾಗಿದ್ದಳಂತೆ. ಆಗ ಆಕೆಗೆ 17 ವರ್ಷವಾಗಿತ್ತಂತೆ. ಒಂದು ದಿನ ರೋನಿ ಮನೆಯಿಂದ ನಾಪತ್ತೆಯಾಗಿದ್ದನಂತೆ. ಇದನ್ನು ಕೇಳಲು ಅಪ್ರಾಪ್ತೆ ಆತನ ಮನೆಗೆ ಹೋಗಿದ್ದಾಳೆ. ಆದ್ರೆ ಆತನ ನೆಪ ಹೇಳಿ ಹೊಟೇಲ್ ಗೆ ಕರೆದುಕೊಂಡು ಹೋದ ತಂದೆ ಸ್ನೇಹಿತನಿಗೆ ಒಪ್ಪಿಸಿದ್ದಾನಂತೆ. ರೈಲ್ವೆ ಟಿಟಿ ಸ್ನೇಹಿತ, ಮದುವೆ ಮಾಡಿಸುವ ಆಸೆ ತೋರಿಸಿ ಅತ್ಯಾಚಾರವೆಸಗಿದ್ದಾನಂತೆ. ಗರ್ಭಿಣಿಯಾಗಿದ್ದ ಅಪ್ರಾಪ್ತೆ ಹೆರಿಗೆ ನಂತ್ರ ಮತ್ತೆ ರೋನಿ ತಂದೆ-ತಾಯಿಗೆ ವಿಷ್ಯ ತಿಳಿಸಿದ್ದಾರೆ. ಆದ್ರೆ ರೋನಿ ಸುಳಿವು ನೀಡದ ತಂದೆ, ಆಕೆಯನ್ನು ಫ್ಲಾಟ್ ಒಂದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನಂತೆ. ಈ ಬಗ್ಗೆ ಪೀಡಿತೆ ದೂರು ನೀಡಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.