ಅಪಹರಣ ಹಾಗೂ ಸುಲಿಗೆ ಪ್ರಕರಣದಲ್ಲಿ ಪುಣೆಯ ಐವರ ವಿರುದ್ಧ ದಾಖಲಾದ ಎಫ್ಐಆರ್ ಒಂದನ್ನು ವಜಾಗೊಳಿಸಬೇಕಾದಲ್ಲಿ ಆರು ತಿಂಗಳ ಮಟ್ಟಿಗೆ, ಪ್ರತಿ ತಿಂಗಳು ಎರಡು ಭಾನುವಾರಗಳಂದು ವೃದ್ಧಾಶ್ರಮದಲ್ಲಿ ಕೆಲಸ ಮಾಡಲು ಬಾಂಬೆ ಹೈಕೋರ್ಟ್ ಆದೇಶ ನೀಡಿದೆ.
ಆಪಾದಿತರ ಮೇಲಿನ ಪ್ರಕರಣ ಏನಪ್ಪಾ ಅಂದ್ರೆ: ಪುಣೆಯ 30 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರೊಂದಿಗೆ ಸ್ನೇಹ ಬೆಳೆಸಿಕೊಂಡ ಆಪಾದಿತರು ತಮ್ಮದೊಂದು ಆನ್ಲೈನ್ ಬೆಟ್ಟಿಂಗ್ ಗೇಮ್ಗಳಲ್ಲಿ ಭಾಗಿಯಾಗಲು ಆಹ್ವಾನಿಸಿದ್ದಾರೆ. ತಮ್ಮ ಬಳಿ ಒಂದು ಮೊತ್ತ ಹೂಡಿಕೆ ಮಾಡಿದಲ್ಲಿ ದೊಡ್ಡ ಮಟ್ಟದ ರಿಟರ್ನ್ಸ್ ಪಕ್ಕಾ ಸಿಗುತ್ತದೆ ಎಂದು ಸಂತ್ರಸ್ತನ ನಂಬಿಸಿದ್ದಾರೆ ಆಪಾದಿತರು. ಇದಕ್ಕೆ ಒಪ್ಪಿದ ಆಪಾದಿತ ಒಂದು ಮೊತ್ತವನ್ನು ಹೂಡಿಯೂಬಿಟ್ಟಿದ್ದಾನೆ.
ಓಲಾ ಇ-ಸ್ಕೂಟರ್ ಖರೀದಿಗೆ ಪ್ಲಾನ್ ಮಾಡಿದ್ದೀರಾ…? ನಿಮಗೆ ತಿಳಿದಿರಲಿ S1, S1 ಪ್ರೊ ಮಾದರಿಗಳಲ್ಲಿನ ಈ ವ್ಯತ್ಯಾಸ
ಬೆಟ್ಟಿಂಗ್ ಅಪ್ಲಿಕೇಶನ್ನಲ್ಲಿ ಆಪಾದಿತರಲ್ಲಿ ಒಬ್ಬಾತ ಸಂತ್ರಸ್ತನ ಪರವಾಗಿ 30,000 ಪಾಯಿಂಟ್ಗಳನ್ನು ಗೆದ್ದು, ಇದಕ್ಕೆ ಪ್ರತಿಯಾಗಿ ಆತನಿಂದ 30 ಲಕ್ಷ ರೂ.ಗಳ ಬೇಡಿಕೆ ಇಟ್ಟಿದ್ದಾರೆ. ತನ್ನ ಬಳಿ ಅಷ್ಟು ದುಡ್ಡಿಲ್ಲವೆಂದು ಸಂತ್ರಸ್ತನನ್ನು ಅಪಹರಣ ಮಾಡಿ ಆತನ ಮೇಲೆ ಹಲ್ಲೆ ಮಾಡಿದ್ದಾರೆ ಆಪಾದಿತರು.
ಇದರ ಬೆನ್ನಿಗೇ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ ಸಂತ್ರಸ್ತ, ಆಪಾದಿತರ ವಿರದ್ಧ ಐಪಿಸಿಯ ಸೆಕ್ಷನ್ 365 (ಅಪಹರಣ), 384 (ಸುಲಿಗೆ). 504 (ಉದ್ದೇಶಪೂರಿತ ಅಪಮಾನ), 506 (ಬೆದರಿಕೆಯೊಡ್ಡುವುದು), 34 (ಸಾಮಾನ್ಯ ಉದ್ದೇಶ) ಅಡಿ ಪುಣೆಯ ವನ್ವಾಡಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಹೈಕೋರ್ಟ್ನಲ್ಲಿ ವಿಚಾರಣೆ ವೇಳೆ, ಎಫ್ಐಆರ್ನಿಂದಾಗಿ ತಮಗೆ ಕೆಲಸ ಕಳೆದುಕೊಳ್ಳುವಂತೆ ಆಗಿದೆ ಎಂದು ಆಪಾದಿತರೊಬ್ಬರು ಹೇಳಿದ್ದು, ಬೇರೆ ಕೆಲಸ ಹುಡುಕುವುದು ಕಷ್ಟವಾಗಿದೆ ಎಂದಿದ್ದಾರೆ. ತಾವು ಮಾಡಿದ ಕೆಲಸಕ್ಕೆ ತಮಗೆ ವಿಷಾದವಿದ್ದು, ಇದಕ್ಕೆ ಪ್ರಾಯಶ್ಚಿತವಾಗಿ ಸಾಮಾಜಿಕ ಸೇವೆಯಲ್ಲಿ ಭಾಗಿಯಾಗುವುದಾಗಿ ಹೇಳಿಕೊಂಡಿದ್ದಾರೆ ಆಪಾದಿತರು.
30 ವರ್ಷದ ವ್ಯಕ್ತಿ ಹೈಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ್ದು, ತಾನು ಮತ್ತು ಐವರು ಆರೋಪಿಗಳು ಸೌಹಾರ್ದಯುತವಾಗಿ ವಿಷಯವನ್ನು ಇತ್ಯರ್ಥಗೊಳಿಸಿದ್ದೇವೆ ಎಂದು ತಿಳಿಸಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಎಎಸ್ ಕಿಲೋರ್ ಮತ್ತು ಪಿಬಿ ವರಾಳೆ ಅವರಿದ್ದ ಪೀಠ ತಿಳಿಸಿದ್ದು,, “ನಾವು ನಮ್ಮಲ್ಲಿನ ಪರಸ್ಪರ ತಪ್ಪುಗ್ರಹಿಕೆಗಳನ್ನು ಶಾಂತಿಯುತವಾಗಿ ಮತ್ತು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಂಡಿದ್ದೇವೆ ಮತ್ತು ಸಮಾಜದಲ್ಲಿ ಶಾಂತಿ ನೆಲೆಸಲು ಇಂಥ ವಿಷಯಗಳು ಅಡ್ಡಿಯಾಗಬಾರದು ಮತ್ತು ಕೇವಲ ತಪ್ಪು ಸಂವಹನದ ಆಧಾರದ ಮೇಲೆ ನೋಂದಾಯಿಸಲಾದ ಈ ಪ್ರಕರಣದಲ್ಲಿ ಕಾನೂನು ಕ್ರಮವನ್ನು ಮುಂದುವರಿಸುವುದರಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ” ಎಂದು ಆತನ ಅಫಿಡವಿಟ್ ತಿಳಿಸಿದೆ.
ಹೀಗಾಗಿ, ದೂರುದಾರರು ಮತ್ತು ಆರೋಪಿಗಳು ಸೌಹಾರ್ದಯುತವಾಗಿ ವಿಷಯವನ್ನು ಇತ್ಯರ್ಥಪಡಿಸಿಕೊಳ್ಳಲು ಒಪ್ಪಿಕೊಂಡಿರುವುದರಿಂದ ವಿಚಾರಣೆಯನ್ನು ಮುಂದುವರಿಸುವುದರಿಂದ ಯಾವುದೇ ಉದ್ದೇಶ ಪೂರೈಸಿದಂತೆ ಆಗುವುದಿಲ್ಲ ಎಂದು ಪೀಠ ಹೇಳಿದೆ. “ಅರ್ಜಿದಾರರು ಯುವಕರಾಗಿದ್ದು, ತಮ್ಮ ವೃತ್ತಿಜೀವನವನ್ನು ಹೊಸದಾಗಿ ಪ್ರಾರಂಭಿಸಲು ಬಯಸುತ್ತಾರೆ ಹಾಗೂ ಇದಕ್ಕಾಗಿ ಹಿಂದಿನದನ್ನು ಮರೆತು ಜೀವನದಲ್ಲಿ ನೆಲೆಗೊಳ್ಳಲು ಅವಕಾಶ ಕೊಡುವುದು ಸೂಕ್ತ” ಎಂದು ಪೀಠ ತಿಳಿಸಿದೆ.
ಆರು ತಿಂಗಳ ಅವಧಿಗೆ ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಭಾನುವಾರದಂದು ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 2.00 ರವರೆಗೆ ಪುಣೆಯಲ್ಲಿರುವ ವೃದ್ಧಾಶ್ರಮಕ್ಕೆ ಹಾಜರಾಗುವಂತೆ ನ್ಯಾಯಾಲಯವು ಐದು ಆರೋಪಿ ಅರ್ಜಿದಾರರು ಮತ್ತು ದೂರುದಾರರಿಗೆ ತಿಳಿಸಿದೆ.