ತನ್ನ ಬಳಕೆದಾರರಿಗೆ ಚಾಟ್‌ಬಾಕ್ಸ್‌ನಿಂದ ಆಚೆಗೂ ಧ್ವನಿ ಸಂದೇಶಗಳನ್ನು ಓದಲು ಅನುಕೂಲವಾಗುವಂತೆ ವಾಟ್ಸಾಪ್ ಹೊಸ ಫೀಚರ್ ಒಂದನ್ನು ತರುತ್ತಿದೆ. ಸದ್ಯಕ್ಕೆ ಚಾಟ್‌ನಲ್ಲಿರುವಾಗ ಮಾತ್ರವೇ ನೀವು ಧ್ವನಿ ಸಂದೇಶವನ್ನು ನೋಡಬಹುದಾಗಿದೆ.
ಈ ಹೊಸ ಫೀಚರ್ ಮೂಲಕ ಬಳಕೆದಾರರು ಅಪ್ಲಿಕೇಶನ್ ಮಿನಿಮೈಜ಼್ ಮಾಡಿದಾಗಲೂ ಸಹ ಆಡಿಯೋವನ್ನು ಆಲಿಸಬಹುದಾಗಿದೆ. ಇದೇ ವೇಳೆ ಬಳಕೆದಾರರು ಒಂದು ಚಾಟ್‌ನಿಂದ ಮತ್ತೊಂದು ಚಾಟ್‌ಗೆ ಸ್ವಿಚ್ ಆದ ಮೇಲೆ ಹೀಗೆ ಆಡಿಯೋ ಕೇಳಲು ಬರದು. ಈ ಹೊಸ ಫೀಚರ್ ಅನ್ನು ವಾಟ್ಸಾಪ್‌ನ ಐಓಎಸ್ ವರ್ಷನ್ 22.4.75ನಲ್ಲಿ ಕಾಣಲಾಗುತ್ತಿದೆ. ಆದರೆ ಈ ಫೀಚರ್‌ನ ಆಂಡ್ರಾಯ್ಡ್ ಹಾಗೂ ವಾಟ್ಸಾಪ್ ವೆಬ್ ವರ್ಶನ್‌ಗಳ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.
ಸ್ನೇಹಿತನಿಗೆ ಕಳುಹಿಸಬೇಕಿದ್ದ ಮೆಸ್ಸೇಜ್ ಪ್ರೇಮಿಗೆ ಸೆಂಡ್ ಆಯ್ತು
ಆಪಲ್ ಫೋನ್‌ಗಳಲ್ಲಿ ಕೆಳಗಿನಿಂದ ಹಾಗೇ ಸ್ವೈಪ್ ಮಾಡಿದರೆ ವಾಟ್ಸಾಪ್ ಅಪ್ಲಿಕೇಶನ್ ತನ್ನಿಂತಾನೇ ಮಿನಿಮೈಜ಼್ ಆಗುತ್ತದೆ. ಇದೇ ವೇಳೆ ವಾಟ್ಸಾಪ್‌ನಲ್ಲಿ ಬಂದ ಬೇರೆ ಸಂದೇಶಗಳನ್ನು ಓದಲು ಹೋದಾಗ ಧ್ವನಿ ಸಂದೇಶ ಪಾಸ್ ಆಗುತ್ತದೆ.
ಇದೇ ವೇಳೆ, ಮೆಟಾ ಮಾಲೀಕತ್ವದ ಸಂದೇಶ ರವಾನೆ ದಿಗ್ಗಜ ತನ್ನ ವಾಟ್ಸಾಪ್ ಕಮ್ಯೂನಿಟಿ ಫೀಚರ್ ಮೇಲೆ ಕೆಲಸ ಮಾಡುತ್ತಿದ್ದು, ಗ್ರೂಪ್‌ಗಳ ಅಡ್ಮಿನ್‌ಗಳಿಗೆ ಇನ್ನಷ್ಟು ನಿಯಂತ್ರಣ ನೀಡಲು ಬಯಸುತ್ತಿದೆ.