ಪಂಬನ್ ಸೇತುವೆಯ ಅದ್ಭುತ ಫೋಟೋ ನೋಡಿ ಪುಳಕಿತಗೊಂಡ ನೆಟ್ಟಿಗರು..! 18-02-2022 8:42AM IST / No Comments / Posted In: Latest News, India, Live News, Tourism ತಮಿಳುನಾಡಿನ ಪೂರ್ವ ಕರಾವಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ಪಂಬನ್ ಸೇತುವೆಯ ಕೆಲ ಅದ್ಭುತ ಫೋಟೋಗಳನ್ನು ರೈಲ್ವೆ ಸಚಿವಾಲಯ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದೆ. ಬಂಗಾಳಕೊಲ್ಲಿಯ ಹಸಿರು ನೀರಿನ ನಡುವೆ ಹಳೆಯ ಪಂಬನ್ ಸೇತುವೆಯ ಮೂಲಕ ಹಾದುಹೋಗುವ ಪ್ಯಾಸೆಂಜರ್ ರೈಲಿನ ದೃಶ್ಯ ಮನೋಹರವಾಗಿದೆ. ಕಲಾಕೃತಿಯಂತೆ ಕಾಣುವ ಆಕಾಶದಲ್ಲಿನ ಮೋಡಗಳು, ಕಲಾಕೃತಿಯಂತೆ ಕಾಣುವ ಸುಂದರ ದೃಶ್ಯವು ಛಾಯಾಚಿತ್ರಗಳ ಅಂದವನ್ನು ಮತ್ತಷ್ಟು ಹೆಚ್ಚಿಸಿವೆ. ಪಂಬನ್ ಸೇತುವೆಗೆ ಪೂರಕವಾಗಿರುವ ಭವ್ಯವಾದ ನೀಲಿ ಆಕಾಶ ನೋಡಲು ಎಷ್ಟು ಅಂದ..! ಇದು ರಾಮೇಶ್ವರಂ-ಮಧುರೈ ಪ್ಯಾಸೆಂಜರ್ ರೈಲು ಹಳೆಯ ಸೇತುವೆಯ ಮೂಲಕ ಹಾದುಹೋಗುವ ಆಹ್ಲಾದಕರ ನೋಟಗಳು ಎಂದು ಟ್ವೀಟ್ಗೆ ಶೀರ್ಷಿಕೆ ಬರೆಯಲಾಗಿದೆ. ಫೋಟೋಗಳನ್ನು ನೋಡಿದ ನೆಟ್ಟಿಗರಂತೂ ಬೆರಗಾಗಿದ್ದಾರೆ. ಅದ್ಭುತ ದೃಶ್ಯ, ನೋಡಲೆರಡು ಕಣ್ಣುಗಳು ಸಾಲೋಲ್ಲ ಅಂತೆಲ್ಲಾ ಬಳಕೆದಾರರು ಉದ್ಘರಿಸಿದ್ದಾರೆ. 280 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ವಿಕಾಸ್ ನಿಗಮ್ ಲಿಮಿಟೆಡ್ನಿಂದ ನಿರ್ಮಿಸಲಾಗುತ್ತಿರುವ ಹೊಸ ಪಂಬನ್ ಸೇತುವೆಯು ಭಾರತದ ಮೊದಲ ವರ್ಟಿಕಲ್ ಲಿಫ್ಟ್ ರೈಲ್ವೆ ಸಮುದ್ರ ಸೇತುವೆಯಾಗಿದೆ. ಈ ವರ್ಷದ ಮಾರ್ಚ್ನೊಳಗೆ ನಿರ್ಮಾಣ ಪೂರ್ಣಗೊಳ್ಳುವ ನಿರೀಕ್ಷೆಯಿದೆ. 2.07 ಕಿ.ಮೀ ಉದ್ದದ ಡ್ಯುಯಲ್-ಟ್ರ್ಯಾಕ್ ಸೇತುವೆಯು, ಅದರ ಮಧ್ಯ ಭಾಗವನ್ನು ಹಡಗುಗಳು ಹಾದುಹೋಗಲು ಮೇಲಕ್ಕೆ ಎತ್ತುವ ತಂತ್ರಜ್ಞಾನವನ್ನು ಸಹ ಒಳಗೊಂಡಿರುವುದು ವಿಶೇಷವಾಗಿದೆ. ಹೊಸ ಸೇತುವೆಯು ರಾಮೇಶ್ವರಂ ಮತ್ತು ಧನುಷ್ಖೋಡಿ ಯಾತ್ರಾರ್ಥಿಗಳಿಗೆ ವರದಾನವಾಗುವುದರ ಜೊತೆಗೆ ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ತಮಿಳುನಾಡನ್ನು ರಾಮೇಶ್ವರಂ ದ್ವೀಪ ಎಂದೂ ಕರೆಯಲ್ಪಡುವ ಪಂಬನ್ ದ್ವೀಪದೊಂದಿಗೆ ಸಂಪರ್ಕಿಸುವ ಹಳೆಯ ಪಂಬನ್ ಸೇತುವೆಯು ದೇಶದ ಅತಿ ಉದ್ದದ ಸಮುದ್ರ ಸೇತುವೆಗಳಲ್ಲಿ ಒಂದಾಗಿದೆ. ಹಾಗೂ ಇದು 1914 ಕ್ಕಿಂತಲೂ ಹಿಂದಿನದಾಗಿದೆ. ಶ್ರೀಲಂಕಾದೊಂದಿಗೆ ವ್ಯಾಪಾರ ಸಂಬಂಧಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ಬ್ರಿಟೀಷರು ಇದನ್ನು ನಿರ್ಮಿಸಿದ್ದರು. Magnificent Blue Sky complementing Great Pamban Bridge! Exhilarating views of the Rameswaram-Madurai passenger train passing through the old bridge, the piers of under-construction new Pamban Bridge(Tamil Nadu) are also visible. pic.twitter.com/etIR5P5ZBp — Ministry of Railways (@RailMinIndia) February 16, 2022 New Pamban Bridge, India’s first vertical lift Railway sea bridge. Target #Infra4India March 2022. pic.twitter.com/8HnqnIFW3W — Ashwini Vaishnaw (मोदी का परिवार) (@AshwiniVaishnaw) October 6, 2021 https://twitter.com/AmiyaArnava/status/1493991486488121345?ref_src=twsrc%5Etfw%7Ctwcamp%5Etweetembed%7Ctwterm%5E1493991486488121345%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-in-india%2Frailways-ministry-photos-of-old-pamban-bridge-7778450%2F