alex Certify ಈ ನಗರಗಳಲ್ಲಿಯೂ ಬುಕ್ ಮಾಡಬಹುದು ಚೇತಕ್​ ಎಲೆಕ್ಟ್ರಿಕ್​ ಸ್ಕೂಟರ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ನಗರಗಳಲ್ಲಿಯೂ ಬುಕ್ ಮಾಡಬಹುದು ಚೇತಕ್​ ಎಲೆಕ್ಟ್ರಿಕ್​ ಸ್ಕೂಟರ್​..!

ಬಜಾಜ್​ ಆಟೋ ಕೆಲ ದಿನಗಳ ಹಿಂದಷ್ಟೇ ಚೇತಕ್​ ಎಲೆಕ್ಟ್ರಿಕ್​ ಸ್ಕೂಟರ್​ಗಳು ದೆಹಲಿ, ಮುಂಬೈ ಹಾಗೂ ಗೋವಾದಲ್ಲಿ ಲಭ್ಯವಿದೆ ಎಂದು ಹೇಳಿತ್ತು. ಕೆಲವು ದಿನಗಳ ಹಿಂದಿನಿಂದ ಬಜಾಜ್​ ಆಟೋ ಕಂಪನಿಯು ಈ ಮೂರು ನಗರಗಳಲ್ಲಿ ಚೇತಕ್​ ಎಲೆಕ್ಟ್ರಿಕ್​ ಸ್ಕೂಟರ್​ಗಳನ್ನು ಬುಕ್ಕಿಂಗ್​ ಮಾಡಲು ಅವಕಾಶ ಕಲ್ಪಿಸಿವೆ. ಈ ಮೂಲಕ ಚೇತಕ್​ ಸ್ಕೂಟರ್ಗಳು ದೇಶದ 20 ನಗರಗಳಲ್ಲಿ ಲಭ್ಯವಿದೆ ಎಂದು ವರದಿಯಾಗಿದೆ.

ಕಳೆದ ವರ್ಷದವರೆಗೂ ಚೇತಕ್​ ಸ್ಕೂಟರ್​ಗಳು ದೇಶದ 8 ನಗರಗಳಲ್ಲಿ ಮಾತ್ರ ಬುಕ್ಕಿಂಗ್​ಗೆ ಲಭ್ಯವಿತ್ತು. ಆದರೆ ಈ ವರ್ಷದಲ್ಲಿ ಹೆಚ್ಚುವರಿ 12 ನಗರಗಳಲ್ಲಿ ಎಲೆಕ್ಟ್ರಿಕ್​ ಸ್ಕೂಟರ್​​ಗಳನ್ನು ಬುಕ್ಕಿಂಗ್​ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ. ಮುಂಬೈ, ದೆಹಲಿ, ಗೋವಾ, ಸೂರ್​, ಕೊಯಂಬತ್ತೂರು, ಕೊಚ್ಚಿ, ಹುಬ್ಬಳ್ಳಿ, ಮಧುರೈ, ನಾಸಿಕ್​, ಕೋಝಿಕ್ಕೋಡ್, ವಸಾಯ್​ ಹಾಗೂ ವಿಶಾಖಪಟ್ಟಣಂನಲ್ಲಿ ಚೇತಕ್ ಎಲೆಕ್ಟ್ರಿಕ್​ ಸ್ಕೂಟರ್​ಗಳನ್ನು ಬುಕ್ ಮಾಡಬಹುದಾಗಿದೆ. ಆಸಕ್ತ ಗ್ರಾಹಕರು ಚೇತಕ್​ ಎಲೆಕ್ಟ್ರಿಕ್​ ಸ್ಕೂಟರ್​ಗಳನ್ನು ಆನ್​ಲೈನ್​ನಲ್ಲಿ 2 ಸಾವಿರ ರೂಪಾಯಿಗಳ ಟೋಕನ್​ಗಳನ್ನು ಖರೀದಿಸಿ ಬುಕ್ಕಿಂಗ್​ ಮಾಡಬಹುದಾಗಿದೆ.

ಇನ್ನು ಚೇತಕ್​ ಎಲೆಕ್ಟ್ರಿಕ್​ ಸ್ಕೂಟರ್​ಗಳ ವಿಚಾರವಾಗಿ ಮಾತನಾಡಿದ ಬಜಾಜ್​ ಆಟೋ ಎಕ್ಸಿಕ್ಯೂಟಿವ್ ಎಡಿಟರ್​, ಚೇತಕ್‌ನ ಯಶಸ್ಸನ್ನು ಸಂಪೂರ್ಣವಾಗಿ ಪರೀಕ್ಷಿಸಿದ, ವಿಶ್ವಾಸಾರ್ಹ ಉತ್ಪನ್ನದ ಗುಣಮಟ್ಟದಲ್ಲಿ ನಿರ್ಮಿಸಲಾಗಿದೆ. ಸ್ಕೂಟರ್​ಗಳಿಗೆ ಬೇಡಿಕೆ ಹೆಚ್ಚುತ್ತಿದ್ದು ಈ ಹೆಚ್ಚುತ್ತಿರುವ ಬೇಡಿಕೆಯನ್ನು ಸರಿಹೊಂದಿಸಲು ಮುಂಬರುವ ದಿನಗಳಲ್ಲಿ ಚೇತಕ್​ ನೆಟ್​ವರ್ಕ್​ನ್ನು ದ್ವಿಗುಣಗೊಳಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...