alex Certify ನೋಡ ನೋಡುತ್ತಿದ್ದಂತೆಯೇ ಈಜುಗಾರನನ್ನು ತಿಂದು ತೇಗಿದ ದೈತ್ಯ ಶಾರ್ಕ್​….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡ ನೋಡುತ್ತಿದ್ದಂತೆಯೇ ಈಜುಗಾರನನ್ನು ತಿಂದು ತೇಗಿದ ದೈತ್ಯ ಶಾರ್ಕ್​….!

ಆಸ್ಟ್ರೇಲಿಯಾದ ಸಿಡ್ನಿ ಬೀಚ್​ನಲ್ಲಿ ಈಜುತ್ತಿದ್ದ ವ್ಯಕ್ತಿಯನ್ನು ದೈತ್ಯಾಕಾರದ ಶಾರ್ಕ್​ ನುಂಗಿ ಹಾಕಿದ ಬೆಚ್ಚಿ ಬೀಳಿಸುವ ಘಟನೆಯೊಂದು ವರದಿಯಾಗಿದೆ. ಶಾರ್ಕ್​ ಈಜುಗಾರನ ಮೇಲೆ ದಾಳಿ ಮಾಡಿದ ದೃಶ್ಯಗಳು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.

ಲಿಟಲ್​ ಬೇ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಈ ಭಯಾನಕ ಘಟನೆಯು ಘಟಿಸಿದ ಅರ್ಧ ಗಂಟೆಗಳ ಬಳಿಕ ಈಜುಗಾರನ ಅವಶೇಷಗಳನ್ನು ಪತ್ತೆ ಮಾಡುವಲ್ಲಿ ರಕ್ಷಣಾ ತಂಡವು ಯಶಸ್ವಿಯಾಗಿದೆ.

ಈಜುಗಾರನ ಮೇಲೆ ದಾಳಿ ಮಾಡಿದ ದೈತ್ಯಾಕಾರದ ಶಾರ್ಕ್​ ಅವರನ್ನು ಸಮುದ್ರದಾಳಕ್ಕೆ ಎಳೆದೊಯ್ದಿದೆ ಎಂದು ಮೀನುಗಾರರೊಬ್ಬರು ಮಾಹಿತಿ ನೀಡಿದ್ದರು. ಮನುಷ್ಯನ ಮೇಲೆ ದೈತ್ಯಾಕಾರದ ಶಾರ್ಕ್​ ದಾಳಿ ಇಟ್ಟ ಭಯಾನಕ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

https://twitter.com/i/status/1494134098675355649

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...