ವಿಜಯನಗರ ಜಿಲ್ಲೆ ಹರಪನಹಳ್ಳಿಯ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಭರತ ಹುಣ್ಣಿಮೆ ದಿನ ನಡೆದ ಕಾರ್ಣಿಕದಲ್ಲಿ ‘ಅಂಬ್ಲಿ ರಾಶಿಗೆ ಮುತ್ತಿನ ಗಣಿ ಸಂಪಾದೀತಲೆ ಪರಾಕ್’ ಎಂದು ಗೊರವಪ್ಪ ಕೋಟೆಪ್ಪ ಕಾರ್ಣಿಕ ನುಡಿದಿದ್ದಾರೆ.
ಇದರ ಅರ್ಥ ಈ ಬಾರಿ ರಾಜ್ಯದಲ್ಲಿ ಸಮೃದ್ಧ ಮಳೆ ಜೊತೆಗೆ ಬೆಳೆ ಆಗಲಿದ್ದು, ಜನರು ಸಹ ನೆಮ್ಮದಿ ಮತ್ತು ಸಹಬಾಳ್ವೆಯಿಂದ ಬದುಕುತ್ತಾರೆ ಎಂದು ಹೇಳಲಾಗಿದೆ.
ಇನ್ನು ವಿಜಯನಗರ ಜಿಲ್ಲೆಯ ಹೂವಿನ ಹಡಗಲಿಯಲ್ಲಿ ಫೆಬ್ರವರಿ 18ರಂದು ಸುಕ್ಷೇತ್ರ ಮೈಲಾರ ಲಿಂಗೇಶ್ವರ ಕಾರ್ಣಿಕೋತ್ಸವ ನಡೆಯಲಿದ್ದು, ಯಾವ ಕಾರ್ಣಿಕ ನುಡಿ ಹೊರ ಬೀಳಬಹುದೆಂದು ಜನರು ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ.