ಬೆಂಗಳೂರು: ಅತಿಥಿ ಉಪನ್ಯಾಸದ ಆದಾಯಕ್ಕೆ ಶೇಕಡ 18 ರಷ್ಟು ಜಿಎಸ್ಟಿ ಪಾವತಿಸಬೇಕು ಎಂದು ಅಥಾರಿಟಿ ಆಫ್ ಅಡ್ವಾನ್ಸ್ ರೋಲಿಂಗ್(AAR) ಕರ್ನಾಟಕ ಪೀಠ ಆದೇಶ ನೀಡಿದೆ. ಅತಿಥಿ ಉಪನ್ಯಾಸ ನೀಡಿ ಗಳಿಸುವ ಆದಾಯಕ್ಕೆ ಶೇಕಡ 18 ರಷ್ಟು ಜಿಎಸ್ಟಿ ಪಾವತಿಸಬೇಕು ಎಂದು ಹೇಳಲಾಗಿದೆ.
ಸಾಯಿರಾಮ್ ಗೋಪಾಲಕೃಷ್ಣ ಭಟ್ ಅವರು ಅತಿಥಿ ಉಪನ್ಯಾಸ ಮೇಲಿನ ಜಿಎಸ್ಟಿ ಕುರಿತಾಗಿ ಸ್ಪಷ್ಟೀಕರಣ ನೀಡಬೇಕೆಂದು ಮನವಿ ಮಾಡಿದ್ದರು. ಅತಿಥಿ ಉಪನ್ಯಾಸ ತೆರಿಗೆ ವಿನಾಯಿತಿಗೆ ಒಳಪಡುವುದಿಲ್ಲ. ಈ ಸೇವೆಗೆ ಶೇಕಡ 18ರಷ್ಟು ಜಿಎಸ್ಟಿ ಪಾವತಿಸಬೇಕು ಎಂದು ಎಎಆರ್ ಕರ್ನಾಟಕ ಪೀಠ ಆದೇಶಿಸಿದೆ.
ಅತಿಥಿ ಉಪನ್ಯಾಸಕರು ವೃತ್ತಿ, ಟೆಕ್ನಿಕಲ್ ಮತ್ತು ವ್ಯಾಪಾರ ಸೇವೆಯಲ್ಲಿದ್ದು, ತೆರಿಗೆ ವಿನಾಯಿತಿ ವ್ಯಾಪ್ತಿಗೆ ಬರುವುದಿಲ್ಲ. ವಾರ್ಷಿಕ 20 ಲಕ್ಷ ರೂಪಾಯಿಗಿಂತಲೂ ಹೆಚ್ಚು ವಹಿವಾಟು ನಡೆಸುವವ ಸೇವಾದಾರರಿಗೆ ಇದು ಅನ್ವಯವಾಗುತ್ತದೆ ಎಂದು ಪೀಠ ತಿಳಿಸಿದೆ.