alex Certify ಫೆಬ್ರವರಿ ತಿಂಗಳಿಗೆ ಕರುಣೆಯೇ ಇಲ್ಲ ಎಂದು ದುಃಖ ವ್ಯಕ್ತಪಡಿಸಿದ ಸಂಗೀತ ಪ್ರೇಮಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೆಬ್ರವರಿ ತಿಂಗಳಿಗೆ ಕರುಣೆಯೇ ಇಲ್ಲ ಎಂದು ದುಃಖ ವ್ಯಕ್ತಪಡಿಸಿದ ಸಂಗೀತ ಪ್ರೇಮಿಗಳು

ಸಂಗೀತ ಪ್ರೇಮಿಗಳಿಗೆ ಫೆಬ್ರವರಿ ತಿಂಗಳು ನಿಜಕ್ಕೂ ಕ್ರೂರವಾಗಿದೆ. ಈ ತಿಂಗಳಿಗೆ ಕರುಣೆಯಿಲ್ಲ ಎಂದು ಟ್ವಿಟ್ಟರ್ ನಲ್ಲಿ ಸಂಗೀತ ಪ್ರೇಮಿಗಳು ದುಃಖ ವ್ಯಕ್ತಪಡಿಸಿದ್ದಾರೆ. ಲತಾ ಮಂಗೇಶ್ಕರ್, ಬಪ್ಪಿ ಲಹರಿ ಹಾಗೂ ಸಂಧ್ಯಾ ಮುಖರ್ಜಿ ಅವರನ್ನು ಕಳೆದುಕೊಂಡ ಗಾಯನ ಲೋಕ ಬಡವಾಗಿದೆ.

ಭಾರತದ ಗಾನಕೋಗಿಲೆ ಲತಾ ಮಂಗೇಶ್ಕರ್ ನಿಧನದ ನಂತರ ಖ್ಯಾತ ಸಂಗೀತ ನಿರ್ದೇಶಕ ಬಪ್ಪಿ ಲಹರಿ ಅನಾರೋಗ್ಯದಿಂದ ಬುಧವಾರ ನಿಧನರಾಗಿದ್ದಾರೆ. ಹಾಗೂ ಪ್ರಸಿದ್ಧ ಬಂಗಾಳಿ ಗಾಯಕಿ ಸಂಧ್ಯಾ ಮುಖರ್ಜಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಇದು ಸಂಗೀತ ಪ್ರೇಮಿಗಳ ಹೃದಯದಲ್ಲಿ ಶೂನ್ಯವನ್ನುಂಟು ಮಾಡಿದೆ. ಟ್ವಿಟ್ಟರ್ ನಲ್ಲಿ ಸಂಗೀತ ದಿಗ್ಗಜರಿಗೆ ನೆಟ್ಟಿಗರು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ಬಪ್ಪಿ ಲಹರಿ ಅವರ ಡಿಸ್ಕೋ ಬೀಟ್‌ಗಳು ಬಾಲಿವುಡ್‌ನಲ್ಲಿ ಜನಪ್ರಿಯಗೊಂಡಿದೆ. ಹಿಂದಿ ಮತ್ತು ಬಂಗಾಳಿ ಚಲನಚಿತ್ರಗಳ ಜೊತೆಗೆ, ಅವರು ಬಹಳಷ್ಟು ತೆಲುಗು ಚಲನಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ.

ಭಾರತೀಯ ಸಂಗೀತದಲ್ಲಿ ಏನು ನಡೆಯುತ್ತಿದೆ ಎಂದು ನೆಟ್ಟಿಗರು ದಿಗ್ಗಜರಿಗೆ ಅಶ್ರುತರ್ಪಣ ಸಲ್ಲಿಸಿದ್ದಾರೆ. ಫೆಬ್ರವರಿ ತಿಂಗಳೊಂದರಲ್ಲೇ ಮೂವರು ಪ್ರಸಿದ್ಧ ಗಾಯಕರನ್ನು ಕಳೆದುಕೊಂಡ ಅಭಿಮಾನಿಗಳು ನೋವಿನಲ್ಲಿದ್ದಾರೆ.

https://twitter.com/adsaying/status/1493830237947576321?ref_src=twsrc%5Etfw%7Ctwcamp%5Etweetembed%7Ctwterm%5E1493830237947576321%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fbappi-lahiri-sandhya-lata-february-has-been-cruel-for-music-lovers-says-twitter-4777547.html

— Arijit Singh FC (@TrollASHaters) February 16, 2022

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...