ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಅದೆಷ್ಟು ಟೀಕೆ ಮಾಡಿದ್ರೂ, ಪ್ರಯೋಜನ ಇಲ್ಲ ಬಿಡಿ. ಅದ್ರಲ್ಲೂ, ಪಾಲಿಕೆಯನ್ನ ಥೇಟ್ ಉಡದಂತೆ ಹಿಡಿದಿರೋ ಕಸದ ಪ್ರಾಬ್ಲಂ ಹೆಜ್ಜೆ ಹೆಜ್ಜೆಗೂ ಕಾಡ್ತಿದೆ. ಈಗಾಗ್ಲೇ ಸಿಟಿಯಲ್ಲಿ ಕಸದ ಸಮಸ್ಯೆ ಜಾಸ್ತಿ ಆಗ್ತಿದೆ. ಇನ್ಮೇಲೆ ಈ ಸಮಸ್ಯೆ ಇನ್ನು ಹೆಚ್ಚಾಗಲಿದೆ. ಶುಕ್ರವಾರದಿಂದ ಗಾರ್ಡನ್ ಸಿಟಿ ಬೆಂಗಳೂರು ಗಾರ್ಬೇಜ್ ಸಿಟಿಯಾಗಲಿದ್ದು, ಗಬ್ಬು ನಾರಲಿದೆ.
ಅರೆ ಬೆಂಗಳೂರು ಗಾರ್ಬೇಜ್ ಸಿಟಿಯಾಗಲಿದ್ಯಾ? ಏಕೆ ಎಂಬ ಪ್ರಶ್ನೆ ಕಾಡೋದು ಸಹಜ ಕಾರಣ ಇಷ್ಟೇ ಗುತ್ತಿಗೆದಾರರ ವಿರುದ್ಧ ಬಿಬಿಎಂಪಿ ತೋರುತ್ತಿರುವ ಧೋರಣೆ. ಸರಿಯಾದ ಸಮಯಕ್ಕೆ ಬಿಲ್ ಕ್ಲಿಯರ್ ಮಾಡದ ಬಿಬಿಎಂಪಿ ವಿರುದ್ಧ ಗುತ್ತಿಗೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಶುಕ್ರವಾರದಿಂದ ಕಸ ವಿಲೇವಾರಿ ಕೆಲಸ ನಿಲ್ಲಿಸಲು ಗುತ್ತಿಗೆದಾರರು ನಿರ್ಧಾರ ಮಾಡಿದ್ದಾರೆ.
BIG NEWS: ಕೊಲ್ಕತ್ತಾ ನೈಟ್ ರೈಡರ್ಸ್ ನಾಯಕನಾಗಿ ಶ್ರೇಯಸ್ ಅಯ್ಯರ್
ಒಂದಲ್ಲಾ ಎರಡಲ್ಲಾ ಕಳೆದ 6 ತಿಂಗಳಿಂದ ಗುತ್ತಿಗೆದಾರರಿಗೆ ಬಿಬಿಎಂಪಿ ಬಾಕಿ ಹಣ ಪಾವತಿಸಿಲ್ಲ. ಹೀಗಾಗಿ ಕಸ ಗುತ್ತಿಗೆದಾರರು ಪಾಲಿಕೆಯ ಹಣಕಾಸು ವಿಭಾಗದ ಸ್ಪೆಷಲ್ ಕಮಿಷನರ್ ತುಳಸಿ ಮದಿನೇನಿ ವಿರುದ್ಧ ಕಿಡಿಕಾರಿದ್ದಾರೆ. ಬಾಕಿ ಬಿಲ್ ಪಾವತಿ ಅಗುವವರೆಗೆ ನಗರದಲ್ಲಿ ಕಸ ವಿಲೇವಾರಿ ಮಾಡಲ್ಲ ಅಂತ ಗುತ್ತಿಗೆದಾರರು ಪಟ್ಟು ಹಿಡಿದಿದ್ದಾರೆ.
ಆರು ತಿಂಗಳಿನಿಂದ ಸುಮಾರು 250 ಕೋಟಿ ರೂಪಾಯಿಯನ್ನು ಬಿಬಿಎಂಪಿ ಬಾಕಿ ಉಳಿಸಿಕೊಂಡಿದೆ. ಹೀಗಾಗಿ ಕಸ ಗುತ್ತಿಗೆದಾರರು ಶುಕ್ರವಾರದಿಂದ ಕಸ ವಿಲೇವಾರಿ ನಿಲ್ಲಿಸಿ, ನಗರದ ಬಿಬಿಎಂಪಿ ಕೇಂದ್ರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ ಎಂದು, ಕಸ ವಿಲೇವಾರಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಾಲಸುಬ್ರಹ್ಮಣ್ಯಂ ಎಚ್ಚರಿಕೆ ನೀಡಿದ್ದಾರೆ.