alex Certify ಬಿಜೆಪಿ ನಾಯಕರು ಆರ್‌ಎಸ್ಎಸ್ ಗುಲಾಮರು; ಈಶ್ವರಪ್ಪ ವಿರುದ್ಧ ಸಿದ್ದರಾಮಯ್ಯ ಕಿಡಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿ ನಾಯಕರು ಆರ್‌ಎಸ್ಎಸ್ ಗುಲಾಮರು; ಈಶ್ವರಪ್ಪ ವಿರುದ್ಧ ಸಿದ್ದರಾಮಯ್ಯ ಕಿಡಿ…..!

ಇಂದು ಇಡೀ ದಿನ ಸದನದಲ್ಲಿ ಈಶ್ವರಪ್ಪ ವಿರುದ್ಧ ಪ್ರತಿಭಟನೆ ನಡೆಸಿದ ಕಾಂಗ್ರೆಸ್, ರಾಷ್ಟ್ರಧ್ವಜ ಹಿಡಿದು ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಈಶ್ವರಪ್ಪ ತಕ್ಷಣವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.‌ ಈ ಎಲ್ಲಾ ಗಲಾಟೆಯಿಂದ ಸ್ಪೀಕರ್ ಕಲಾಪವನ್ನು ನಾಳೆಗೆ ಮುಂದೂಡಿದರು‌‌.

ಕಲಾಪದ ನಂತರ ಪತ್ರಿಕಾಗೋಷ್ಠಿ ನಡೆಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಈಶ್ವರಪ್ಪ ಹಾಗೂ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಳಿಗ್ಗೆ ಯಿಂದ ಪರಿಷತ್ ಮತ್ತು ವಿಧಾನ ಸಭೆಯಲ್ಲಿ ಏನೇನು ನಡೆಯಿತೆಂದು ನೊಡಿದ್ದೀರ. ನಾವು ನಿಲುವಳಿ ಸೂಚನೆ ಮಂಡನೆ ಮಾಡಿದ್ದೇವು. ಆದರೆ ಅದನ್ನ ತಿರಸ್ಕರಿಸಲಾಯ್ತು. ಶಿವಮೊಗ್ಗದ ಸರ್ಕಾರಿ ಕಾಲೇಜ್ ಧ್ವಜ ಸ್ಥಂಭದ ಮೇಲೆ ಕೇಸರಿ ಧ್ವಜವನ್ನ ವಿದ್ಯಾರ್ಥಿಗಳು ಬಿಜೆಪಿ ಕುಮ್ಮಕ್ಕಿನಿಂದ ಹಾರಿಸಿದ್ರು. ಅದಕ್ಕೆ ತಕ್ಕಂತೆ ಈಶ್ವರಪ್ಪ‌ ಕೆಂಪು ಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆಂದು ಹೇಳುವ ಮೂಲಕ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ.‌

ಮಂತ್ರಿ ಸೇರಿದಂತೆ ಯಾರೇ ಆಗಲಿ ಸಂವಿಧಾನದ ಮೇಲೆ ಪ್ರಮಾಣ ಮಾಡ್ತೆವೆ,‌ ಸಂವಿಧಾನಿಕ ಹುದ್ದೆಯಲ್ಲಿರ್ತೆವೆ. ಮಂತ್ರಿಯಾಗಿ ಈಶ್ವರಪ್ಪ ಸರ್ಕಾರದಲ್ಲಿ ಇದ್ರು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ.‌ ಇದು ಅಕ್ಷಮ್ಯ ಅಪರಾಧ ಎಂದು ಈಶ್ವರಪ್ಪ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ರೈತರು ಕೆಂಪು ಕೋಟೆಯ ಮೇಲೆ ಧ್ವಜ ಹಾರಿಸಿದ್ದಕ್ಕೆ, ಅವರ ಮೇಲೆ ಕೇಸ್ ಹಾಕಲಾಗಿತ್ತು. ಈಗ ಇವರ ಮೇಲೆ ಯಾಕೆ ಕೇಸ್ ಹಾಕಿಲ್ಲ. ಬಿಜೆಪಿಗರು ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರ ಭಾಷೆ ಇವೆಲ್ಲಾ ಬದಲಾವಣೆ ಆಗಬೇಕು ಅಂತ ಹೇಳುವವರು. ಇವರ ಹಿಂದೆ ಆರ್‌ಎಸ್ಎಸ್ ಇದೆ.‌

ಆರ್‌ಎಸ್ಎಸ್ ನವರಿಗೆ ರಾಷ್ಟ್ರ ಧ್ವಜದ ಮೇಲೆ ಗೌರವವಿಲ್ಲ, ನಾಗಪುರ ಕಚೇರಿಯಲ್ಲಿ ಈಗಲೂ ಕೇಸರಿ ಧ್ವಜ ಹಾರಿಸ್ತಾರೆ. ಬೈಟಕ್ ಕೂತಾಗ ಕೂಡ ರಾಷ್ಟ್ರ ಧ್ವಜ ಹಾರಿಸಲ್ಲ. ಅವರು ಇನ್ನು ಮನುಸ್ಮೃತಿ ಮನಸ್ಥಿತಿಯಲ್ಲಿದ್ದಾರೆ. ಈಶ್ವರಪ್ಪನವರ ಬಾಯಿಯಲ್ಲಿ ಕೇಸರಿ ಧ್ವಜದ ಹೇಳಿಕೆಯನ್ನು ಆರ್‌ಎಸ್ಎಸ್ ನವರೆ ಹೇಳಿಸಿರಬೇಕು.‌ ಬಿಜೆಪಿ ನಾಯಕರು ಆರ್‌ಎಸ್ಎಸ್ ಗುಲಾಮರಾಗಿದ್ದಾರೆ. ಇಂತಹ ಮನುಸ್ಮೃತಿ ಯೋಚನೆ ಇರುವವರು ಸಚಿವರಾಗಿರಲು ಲಾಯಕ್ಕಲ್ಲ, ಈಶ್ವರಪ್ಪ ಕೂಡಲೇ ರಾಜೀನಾಮೆ ನೀಡಲಿ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...