alex Certify ರೈಲಿನಲ್ಲಿ ಮಹಿಳೆಯರ ಎದುರೇ ಹಸ್ತಮೈಥುನ ಮಾಡಿಕೊಂಡವ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲಿನಲ್ಲಿ ಮಹಿಳೆಯರ ಎದುರೇ ಹಸ್ತಮೈಥುನ ಮಾಡಿಕೊಂಡವ ಅರೆಸ್ಟ್

ಸ್ಥಳೀಯ ರೈಲೊಂದರ ಮಹಿಳಾ ಕಂಪಾರ್ಟ್​ಮೆಂಟ್​ನಲ್ಲಿ ಮಹಿಳೆಯ ಎದುರೇ ಹಸ್ತಮೈಥುನ ಮಾಡಿಕೊಂಡಿದ್ದ 23 ವರ್ಷದ ಆರೋಪಿಯನ್ನು ದಕ್ಷಿಣ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಫೆಬ್ರವರಿ 9ರಂದು ನುಂಗಂಬಾಕ್ಕಂನಿಂದ ತಾಂಬರಂಗೆ ಸಂಚರಿಸುತ್ತಿದ್ದ ಸ್ಥಳೀಯ ರೈಲಿನಲ್ಲಿ ಈ ಘಟನೆ ಸಂಭವಿಸಿತ್ತು.‌

ಬಂಧಿತ ಆರೋಪಿಯನ್ನು ಲಕ್ಷ್ಮಣನ್​ ಎಂದು ಗುರುತಿಸಲಾಗಿದೆ. ಈತ ಮೀನಂಬಕ್ಕಂನ ನಿವಾಸಿಯಾಗಿದ್ದಾನೆ. ಈತನನ್ನು ಕ್ರೋಮ್​ಪೇಟೆಯಲ್ಲಿ ಬಂಧಿಸಿದ ಪೊಲೀಸರು ತಾಂಬರಂ ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಐಪಿಸಿ ಸೆಕ್ಷನ್​ 354 – ಎ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.

ಮಹಿಳಾ ಕಂಪಾರ್ಟ್​ಮೆಂಟ್​ನಲ್ಲಿದ್ದ ಪ್ರಸಿದ್ಧ ತಮಿಳು ಯುಟ್ಯೂಬ್​ ಚಾನೆಲ್​ನ ಪತ್ರಕರ್ತೆ ಈ ಘಟನೆಗೆ ಸಾಕ್ಷಿಯಾದ ಬಳಿಕ ರೈಲ್ವೆ ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದರು ಎನ್ನಲಾಗಿದೆ.

ದೂರಿನಲ್ಲಿರುವ ಮಾಹಿತಿಯ ಪ್ರಕಾರ, ಮಹಿಳೆಯು ರಾತ್ರಿ 9:40ರ ಸುಮಾರಿಗೆ ಲೋಕಲ್​ ಟ್ರೈನ್​ ಏರಿದ್ದರು. ರೈಲು ಪಲ್ಲವರಂ ನಿಲ್ದಾಣವನ್ನು ದಾಟಿದ ಬಳಿಕ ಮಹಿಳೆಯು ಲೇಡಿಸ್​ ಕಂಪಾರ್ಟ್​ಮೆಂಟ್​ನಲ್ಲಿ ಓರ್ವ ಪುರುಷ ಕುಳಿತಿರುವದು ಮಾತ್ರವಲ್ಲದೇ ಆತ ಮಹಿಳೆಯರ ಎದುರಲ್ಲೇ ಹಸ್ತಮೈಥುನ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿದ್ದಾರೆ. ಇದನ್ನು ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿಕೊಂಡ ಮಹಿಳೆಯು ರೈಲಿನಿಂದ ಇಳಿಯುತ್ತಿದ್ದಂತೆ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...