ಕರ್ನಾಟಕದ ಹಿಜಾಬ್ ವಿವಾದ ದೇಶದ ವಿವಿಧ ಭಾಗಗಳನ್ನು ತಲುಪಿದೆ. ಅದರಲ್ಲೂ ಉತ್ತರಪ್ರದೇಶದಲ್ಲಿ ಇದರ ಎಫೆಕ್ಟ್ ಕೊಂಚ ಹೆಚ್ಚಾಗಿದೆ. ಈ ವೇಳೆ ತಾಜ್ ಮಹಲ್‌ನಲ್ಲಿ ಹನುಮಾನ್ ಚಾಲೀಸ ಪಠಿಸಲು ಬಲಪಂಥೀಯ ಸಂಘಟನೆಯ ಕಾರ್ಯಕರ್ತರು ಮುಂದಾಗಿದ್ದರು. ಆದರೆ ಪೊಲೀಸರು ಅವರನ್ನು ತಡೆದಿದ್ದಾರೆ.
ಹಿಜಾಬ್ ವಿವಾದದ ವಿರುದ್ಧ ಪ್ರತಿಭಟನೆ ಮಾಡುವ ಸಲುವಾಗಿ ವಿವಿಧ ಸಂಘಟನೆಯ ಕಾರ್ಯಕರ್ತರು ತಾಜ್ ಮಹಲ್ ಪ್ರವೇಶಿಸಿ ಅಲ್ಲಿ ಹನುಮಾನ್ ಚಾಲೀಸ ಪಠಿಸಲು ಉದ್ದೇಶಿಸಿದ್ದರು.
ಪ್ರತಿಭಟನಾಕಾರರು ಹಿಜಾಬ್‌ಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಅವರು ತಾಜ್ ಮಹಲ್ ಪ್ರವೇಶಿಸುವುದನ್ನು ತಡೆಯಲಾಗಿದೆ ಎಂದು ಸರ್ಕಲ್ ಅಧಿಕಾರಿ ರಾಜೀವ್ ಕುಮಾರ್ ತಿಳಿಸಿದ್ದಾರೆ.
13 ಮಂದಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರಗೈದಿದ್ದ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ
ತಾಜ್ ಮಹಲ್ ಎನ್ನುವುದು ಈಗ ನಮಗೆ ‘ತೇಜೋ ಮಹಾಲಯ್‘ ಅಂದರೆ ಶಿವಮಂದಿರವಾಗಿದೆ. ಹೀಗಾಗಿ ಕೇಸರಿ ಬಟ್ಟೆ ಧರಿಸಿ ಹನುಮಾನ್ ಚಾಲೀಸ ಪಠಿಸಲು ತೆರಳುತ್ತಿದ್ದೆವು. ಆದರೆ ಪೊಲೀಸರು ನಮ್ಮನ್ನು ತಡೆದಿದ್ದಾರೆ ಎಂದು ವಿಶ್ವ ಹಿಂದು ಪರಿಷತ್‌ನ ಅಶೀಶ್ ಆರ್ಯ ತಿಳಿಸಿದ್ದಾರೆ.
ತಾಜ್ ಮಹಲ್‌ನಲ್ಲಿ ಹನುಮಾನ್ ಚಾಲೀಸ ಪಠಿಸಲು ತೆರಳುತ್ತಿದ್ದ ವಿಶ್ವ ಹಿಂದು ಪರಿಷತ್, ಸೇವಾ ಭಾರತಿ ಮತ್ತು ದುರ್ಗಾ ವಾಹಿನಿಯ ಕಾರ್ಯಕರ್ತರನ್ನು ಆಗ್ರಾದ ವಿವಿಧೆಡೆ ಪೊಲೀಸರು ಬಂಧಿಸಿದ್ದಾರೆ.
ನಾವು ಶಾಂತಿಯುತವಾಗಿ ತಾಜ್ ಮಹಲ್ ಆವರಣದಲ್ಲಿ ಹನುಮಾನ ಚಾಲೀಸ ಪಠಿಸಲು ಮುಂದಾಗಿದ್ದೆವು. ಅದಕ್ಕಾಗಿ ಟಿಕೆಟ್ ಸಹ ಪಡೆದುಕೊಳ್ಳುತ್ತೇವೆ ಎಂದಿದ್ದೇವು. ನಮ್ಮದು ಹಿಂಸಾತ್ಮಕ ಪ್ರತಿಭಟನೆಯಲ್ಲ, ಆದರೂ ಪೊಲೀಸರು ನಮ್ಮನ್ನ ಪಾರ್ಕಿಂಗ್ ನಲ್ಲಿಯೇ ತಡೆದಿದ್ದಾರೆ. ಈ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನ ತಡೆಯುವುದೇ ನಮ್ಮ ಗುರಿ, ಅದಕ್ಕಾಗಿಯೇ ಹನುಮಾನ ಚಾಲೀಸ ಪಠಿಸಲು ಮುಂದಾಗಿದ್ದೆವು ಎಂದು, ಸೇವಾ ಭಾರತಿಯ ನಾಯಕಿ ಭಾವನ ಶರ್ಮಾ ಬೇಸರ ವ್ಯಕ್ತಪಡಿಸಿದ್ದಾರೆ.