ಹೆಚ್ಚಿನ ಸಂಖ್ಯೆಯ ಉದ್ಯೋಗಾಕಾಂಕ್ಷಿಗಳು ಶಾಶ್ವತವಾಗಿ ʼವರ್ಕ್ ಫ್ರಂ ಹೋಮ್ʼ ಕೆಲಸವನ್ನೇ ನೀಡುವ ಕಂಪನಿಗಳನ್ನು ಆಯ್ಕೆ ಮಾಡಲು ಬಯಸುತ್ತಿದ್ದಾರೆ ಎಂಬುದು ವರದಿಯೊಂದರಲ್ಲಿ ಬಯಲಾಗಿದೆ. ಕೋವಿಡ್ ಸಾಂಕ್ರಾಮಿಕದ ಬಳಿಕ ವರ್ಕ್ ಫ್ರಂ ಹೋಮ್ ಎಂಬ ವರ್ಕಿಂಗ್ ಮಾಡೆಲ್ ಇದೀಗ ಹಾಸು ಹೊಕ್ಕಾಗಿದೆ.
Naukri.com ನೀಡಿರುವ ಮಾಹಿತಿಯ ಪ್ರಕಾರ ಕಳೆದ ವರ್ಷ ಜುಲೈನಿಂದ ಇಲ್ಲಿಯವರೆಗೆ 93 ಸಾವಿರ ಖಾಯಂ ಹಾಗೂ ತಾತ್ಕಾಲಿಕ ರಿಮೋಟ್ ಜಾಬ್ಗಳನ್ನು ಪಟ್ಟಿ ಮಾಡಿದೆ. ಇದರಲ್ಲಿ 22 ಪ್ರತಿಶತ ಕೆಲಸಗಳು ರಿಮೋಟ್ ಜಾಬ್ಗಳೇ ಆಗಿವೆ ಎಂದು ಹೇಳಿದೆ.
ಕಳೆದ ಆರು ತಿಂಗಳಲ್ಲಿ Naukri.com ಭಾರತೀಯ ಉದ್ಯೋಗಾಕಾಂಕ್ಷಿಗಳು ಶಾಶ್ವತ ಹಾಗೂ ತಾತ್ಕಾಲಿಕ ರಿಮೋಟ್ ಜಾಬ್ಗಾಗಿ 32 ಲಕ್ಷ ಉದ್ಯೋಗ ಹುಡುಕಾಟವನ್ನು ಮಾಡಿದ್ದಾರೆ.
ಇದರಲ್ಲಿ 57 ಪ್ರತಿಶತ ಮಂದಿ ಶಾಶ್ವತ ರಿಮೋಟ್ ಜಾಬ್ಗಳಿಗಾಗಿಯೇ ಹುಡುಕಾಟ ನಡೆಸಿದ್ದಾರೆ. ಅದರಲ್ಲೂ ಕಳೆದ ವರ್ಷ ಡಿಸೆಂಬರ್ ತಿಂಗಳೊಂದರಲ್ಲೇ 3.5 ಲಕ್ಷ ಮಂದಿ ರಿಮೋಟ್ ಜಾಬ್ಗಾಗಿ ಹುಡುಕಾಟ ಮಾಡಿದ್ದಾರೆ.
ಕೊರೊನಾ ಸಾಂಕ್ರಾಮಿಕದ ಬಳಿಕ ಈ ವರ್ಕ್ ಫ್ರಂ ಹೋಮ್ ಕಾರ್ಯ ವಿಧಾನವು ಹೆಚ್ಚು ಬಳಕೆಗೆ ಬಂದಿದೆ. ಅಲ್ಲಲ್ಲಿ ರಿಮೋಟ್ ಜಾಬ್ ಅಂದರೆ ಶಾಶ್ವತ ವರ್ಕ್ ಫ್ರಂ ಹೋಂನಂತಹ ಕಾರ್ಯವಿಧಾನವೂ ತಲೆ ಎತ್ತಿದೆ. ಸಾಮಾನ್ಯವಾಗಿ ದೊಡ್ಡ ಮತ್ತು ಸಣ್ಣ ಕಂಪನಿಗಳು ಎಲ್ಲಾ ಮೂರು ರೀತಿಯ ವರ್ಕಿಂಗ್ ಮಾಡೆಲ್ಗಳನ್ನು ಹೊಂದಿದೆ. ಶಾಶ್ವತ ಉದ್ಯೋಗ, ತಾತ್ಕಾಲಿಕ ವರ್ಕ್ ಫ್ರಂ ಹೋಮ್ ಹಾಗೂ ರಿಮೋಟ್ ಜಾಬ್ಗಳನ್ನು ಹೊಂದಿವೆ.
ಅಮೆಜಾನ್, ಟೆಕ್ ಮಹೀಂದ್ರಾ, ಹೆಚ್‌ಸಿಎಲ್, ಪಿಡಬ್ಲ್ಯೂಸಿ, ಟ್ರಿಜೆಂಟ್, ಫ್ಲಿಪ್‌ಕಾರ್ಟ್, ಸೀಮೆನ್ಸ್, ಡೆಲಾಯ್ಟ್, ಒರಾಕಲ್, ಜೆನ್ಸಾರ್, ಟಿಸಿಎಸ್, ಕ್ಯಾಪ್ಜೆಮಿನಿ ಇತ್ಯಾದಿ ತಾತ್ಕಾಲಿಕ ಮತ್ತು ಶಾಶ್ವತ ರಿಮೋಟ್ ಉದ್ಯೋಗಗಳನ್ನು ಪೋಸ್ಟ್ ಮಾಡುವ ಕೆಲವು ಕಂಪನಿಗಳು ಎಂದು ವರದಿ ಹೇಳಿದೆ.