ಮಾರುತಿ ಸುಜುಕಿ ಇಂಡಿಯಾವು ನೂತನ ಬಲೆನೊ ಫೇಸ್ಲಿಫ್ಟ್ ಅನ್ನು ತಮ್ಮ ಅತ್ಯಂತ ನವೀಕರಿಸಿದ ಮಾದರಿಯನ್ನಾಗಿ (ಹೊಸ ವೈಶಿಷ್ಟ್ಯ) ಮಾಡಲು ತಯಾರಿ ನಡೆಸುತ್ತಿದೆ. ಮಾರುತಿ ಸುಜುಕಿ ಇತ್ತೀಚೆಗೆ ಬಿಡುಗಡೆ ಮಾಡಿದ ಟೀಸರ್ ಪ್ರಕಾರ, ಬಲೆನೊ ಫೇಸ್ಲಿಫ್ಟ್ 360 ಡಿಗ್ರಿ ವ್ಯೂ ಕ್ಯಾಮರಾವನ್ನು ಹೊಂದಿದೆ.
ಈ ಹಿಂದೆ, ವಾಹನ ತಯಾರಕರು ಹೊಸ ಫೇಸ್ಲಿಫ್ಟ್ ಬಲೆನೊದ ಒಳಾಂಗಣವನ್ನು ಬಹಿರಂಗಪಡಿಸಿದ್ದರು. ನಿರೀಕ್ಷಿತ ಖರೀದಿದಾರರು ನೆಕ್ಸಾ ಡೀಲರ್ಶಿಪ್ಗಳಲ್ಲಿ 11,000 ರೂ. ಪಾವತಿಸಿ ಅಥವಾ ಆನ್ಲೈನ್ ಮೂಲಕ ಬಲೆನೊವನ್ನು ಬುಕ್ ಮಾಡಬಹುದು. ಹೊಸ ಬಲೆನೊ ರಿಫ್ರೆಶ್ ವಿನ್ಯಾಸದ ಹೆಗ್ಗಳಿಕೆಯನ್ನು ಹೊಂದಿದೆ.
ಹೊಸ ಮಾರುತಿ ಸುಜುಕಿ ಬಲೆನೊದ ಮೊದಲ ಟೀಸರ್ ಮೊದಲ-ಇನ್-ಸೆಗ್ಮೆಂಟ್ ಹೆಡ್-ಅಪ್ ಡಿಸ್ ಪ್ಲೇ ಅನ್ನು ಬಹಿರಂಗಪಡಿಸುತ್ತದೆ. ಹೆಚ್ ಯು ಡಿ ವೈಶಿಷ್ಟ್ಯವು ಸ್ಪೀಡೋಮೀಟರ್, ಕ್ಲೈಮೇಟ್ ಕಂಟ್ರೋಲ್ ಇತ್ಯಾದಿಗಳನ್ನೊಳಗೊಂಡಿದೆ.
ಹೊಸ ಬಲೆನೊ ನೆಕ್ಸ್ಟ್-ಜೆನ್ ಕೆ-ಸೀರೀಸ್ ಡ್ಯುಯಲ್ ಜೆಟ್, ಡ್ಯುಯಲ್ ವಿವಿಟಿ ಎಂಜಿನ್ ಜೊತೆಗೆ ಐಡಲ್ ಸ್ಟಾರ್ಟ್-ಸ್ಟಾಪ್ ಅನ್ನು ಹೊಂದಿರುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಗೇರ್ಬಾಕ್ಸ್ ಅನ್ನು ಪಡೆಯುತ್ತದೆ.
ಆಧುನಿಕ ತಂತ್ರಜ್ಞಾನ, ಸುಧಾರಿತ ವೈಶಿಷ್ಟ್ಯಗಳು ಮತ್ತು ನೆಕ್ಸಾ ಸಿಗ್ನೇಚರ್ ಕ್ರಾಫ್ಟೆಡ್ ಫ್ಯೂಚರಿಸಂ ವಿನ್ಯಾಸ ಭಾಷೆಯೊಂದಿಗೆ, ಸುಸಜ್ಜಿತವಾದ ನ್ಯೂ ಏಜ್ ಬಲೆನೊ ಪ್ರೀಮಿಯಂನಲ್ಲಿ ಸಂಪರ್ಕದ ಹೊಸ ಉದಯಕ್ಕೆ ನಾಂದಿ ಹಾಡಿದೆ. ನ್ಯೂ ಏಜ್ ಬಲೆನೊದಲ್ಲಿ ಕೆಲಸ ಮಾಡುವಾಗ, ಆಧುನಿಕ ತಂತ್ರಜ್ಞಾನಗಳ ಬಳಕೆಯ ಮೇಲೆ ವಿಶೇಷ ಗಮನವನ್ನು ನೀಡಿದ್ದೇವೆ. ಅದು ಗ್ರಾಹಕರನ್ನು ಪ್ರಚೋದಿಸುತ್ತದೆ ಮತ್ತು ಸುರಕ್ಷಿತ ಹಾಗೂ ಹೆಚ್ಚು ಅನುಕೂಲಕರವಾದ ಡ್ರೈವ್ ಅನ್ನು ಖಾತ್ರಿಪಡಿಸುತ್ತದೆ ಎಂದು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ನ ಮುಖ್ಯ ತಾಂತ್ರಿಕ ಅಧಿಕಾರಿ ತಿಳಿಸಿದ್ದಾರೆ.