ಕಿಕ್ಕಿರಿದು ತುಂಬಿರುವ ರಸ್ತೆಗಳಲ್ಲಿ ಸೈರನ್‌ಗಳನ್ನು ಹೊಂದಿರುವ ಆಂಬ್ಯುಲೆನ್ಸ್‌ಗಳು ಎಷ್ಟು ನಿಖರವಾಗಿ, ವೇಗವಾಗಿ ಚಲಿಸುತ್ತವೆ ಎಂಬುದನ್ನು ನೀವು ಬಹುಶಃ ನೋಡಿರಬಹುದು. ವಾಹನಗಳು ತುರ್ತು ವಾಹನವನ್ನು ಹಾದುಹೋಗಲು ದಾರಿ ಮಾಡಿಕೊಟ್ಟರೂ ಸಹ, ಆಂಬ್ಯುಲೆನ್ಸ್ ಚಾಲಕರು ವೇಗವಾಗಿ ವಾಹನ ಚಲಾಯಿಸಬೇಕಾಗುತ್ತದೆ. ಯಾಕೆಂದರೆ ಒಂದು ಜೀವವನ್ನು ಉಳಿಸುವ ಜವಾಬ್ದಾರಿ ಅವರ ಮೇಲಿರುತ್ತದೆ.
ಇದೀಗ ಇಂಥದ್ದೇ ಒಂದು ವಿಡಿಯೋ ವೈರಲ್ ಆಗಿದ್ದು, ಚಾಲಕನ ಕಾರ್ಯಕ್ಷಮತೆ ಹೇಗಿದೆ ಎಂಬುದನ್ನು ಇದು ನಿರೂಪಿಸುತ್ತದೆ. ಹೆಚ್ಚಿನ ಚಾಲಕರು ಸೈರನ್ ಕೇಳಿದ ನಂತರ ಮಾರ್ಗವನ್ನು ತೆರವುಗೊಳಿಸಿದರೂ, ಆಂಬುಲೆನ್ಸ್ ಚಲಿಸಲು ಮಾರ್ಗವು ನಿಖರವಾಗಿಲ್ಲ. ಎದುರಿಗಿರುವ ವಾಹನಗಳಿಂದ ಅತ್ತಿಂದಿತ್ತ ಚಲಾಯಿಸಬೇಕಾದ ಅನಿವಾರ್ಯತೆ ಕಂಡುಬರುತ್ತದೆ. ಚಾಲಕನು ಭಾರಿ ಕೌಶಲ್ಯದಿಂದ ವಾಹನ ಚಲಾಯಿಸಬೇಕಾಗುತ್ತದೆ.
ಬೆಚ್ಚಿಬೀಳಿಸುವಂತಿದೆ ಕಳೆದ 5 ವರ್ಷಗಳಲ್ಲಿ ಪತ್ತೆಯಾದ ʼಹೆರಾಯಿನ್ʼ
ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಆಂಬ್ಯುಲೆನ್ಸ್ ಚಾಲಕರು ವಿವಿಧ ತುರ್ತು ಪರಿಸ್ಥಿತಿಗಳನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ತೋರಿಸುತ್ತದೆ. ಟಿಕ್‌ಟಾಕ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಕಾರುಗಳಿಂದ ತುಂಬಿರುವ ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿರುವುದನ್ನು ತೋರಿಸುತ್ತದೆ.
ವಿಡಿಯೋವನ್ನು ನಿಖರವಾಗಿ ಎಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಚಾಲಕ ಟರ್ಕಿಯ ಬೀದಿಗಳಲ್ಲಿ ಸಂಚರಿಸುತ್ತಿದ್ದಾನೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಆಘಾತಗೊಂಡಿದ್ದಾರೆ.
https://www.youtube.com/watch?v=OdZhQG13K1c